ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಅಧ್ಯಕ್ಷ ಹುದ್ದೆಗೆ ಸೆ.6 ರಂದು ಚುನಾವಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಅಧ್ಯಕ್ಷ ಹುದ್ದೆಗೆ ಸೆ.6 ರಂದು ಚುನಾವಣೆ
ಮಾಜಿ ರಾಷ್ಟ್ರಾಧ್ಯಕ್ಷ ಪರ್ವೆಜ್ ಮುಷರಫ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೆರುವಾದ ರಾಷ್ಟಾಧ್ಯಕ್ಷ ಸ್ಥಾನಕ್ಕೆ ಸೆಪ್ಟೆಂಬರ್ 6 ರಂದು ಚುನಾವಣೆ ನಡೆಯಲಿದ್ದು, ಅಗಸ್ಟ್ 26 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ ಎಂದು ಪಾಕ್ ಮೂಲಗಳು ತಿಳಿಸಿವೆ.

ರಾಷ್ಟ್ರಾಧ್ಯಕ್ಷರ ಚುನಾವಣೆ ಹಾಗೂ ಅಮಾನತುಗೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮರುನೇಮಕ ಕುರಿತಂತೆ ಅಡಳಿತರೂಢ ಸಮ್ಮಿಶ್ರ ಪಕ್ಷಗಳ ನಾಯಕರು ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮತ್ತು ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಪಿಪಿಪಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಬೆಂಬಲಿಸುವುದಾಗಿ ಪ್ರಕಟಿಸಿವೆ.

ಅಡಳಿತರೂಢ ಪಕ್ಷದ ಪಾಲುದಾರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್(ನವಾಜ್) ನ ಮುಖಂಡ ಮಾಜಿ ಪ್ರಧಾನಿ ನವಾಜ್ ಷರೀಫ್ ರಾಷ್ಟ್ರಾಧ್ಯಕ್ಷ ಹುದ್ದೆಗೆ ಜರ್ದಾರಿ ಸ್ಪರ್ಧಿಸುವ ಕುರಿತಂತೆ ಯಾವುದೇ ಹೇಳಿಕೆ ನೀಡಲಿಲ್ಲ, ಆದರೆ ಮುಂಬರುವ ರಾಷ್ಟ್ರಾಧ್ಯಕ್ಷರ ಕುರಿತಂತೆ ಶುಕ್ರವಾರದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಶುಕ್ರವಾರದೊಳಗೆ ಅಮಾನತುಗೊಂಡ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮರುನೇಮಕ ಮಾಡದಿದ್ದಲ್ಲಿ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂತೆಗೆದುಕೊಳ್ಳಲಾಗುವುದು ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಎಚ್ಚರಿಕೆ ನೀಡಿದೆ.
ಮತ್ತಷ್ಟು
ಅವಳಿಬಾಂಬ್ ಸ್ಫೋಟ: 52 ಮಂದಿ ಸಾವು
ಅಧ್ಯಕ್ಷ ಪದವಿಗೆ ಜರ್ದಾರಿ ಸೂಕ್ತ: ಪಿಪಿಪಿ,ಎಂಕ್ಯುಎಂ
ಐಎಇಎ ಮಾತುಕತೆ ಫಲಪ್ರದ-ಇರಾನ್
ರೈಲು ದುರಂತ: ಆರೋಪಿಗೆ 11 ಜೀವಾವಧಿ ಶಿಕ್ಷೆ
ಸಮ್ಮಿಶ್ರ ಸರಕಾರದಿಂದ ನಿರ್ಗಮನ: ನವಾಜ್ ಬೆದರಿಕೆ
ಮ್ಯಾಡ್ರಿಡ್ ಭೀಕರ ವಿಮಾನ ಅಪಘಾತ; ಕನಿಷ್ಠ 153ಸಾವು