ಶ್ರೀಲಂಕಾದ ಯುದ್ದ ವಿಮಾನಗಳು ತಮಿಳು ಉಗ್ರರ ಸರಬರಾಜು ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿ ಸರಬರಾಜು ವ್ಯವಸ್ಥೆಯನ್ನು ನಾಶಗೊಳಿಸಿ 24 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ವರ್ಷಾಂತ್ಯದೊಳಗೆ ತಮಿಳು ಉಗ್ರರ ನೆಲೆಗಳನ್ನು ಧ್ವಂಸಗೊಳಿಸಲು ಶ್ರೀಲಂಕಾದ ಸೇನೆಪಡೆಗಳು ನಿರಂತರ ದಾಳಿ ನಡೆಸುತ್ತಿದ್ದು, ಸೇನಾಪಡೆಗಳ ಹಾಗೂ ತಮಿಳು ಉಗ್ರರ ಮಧ್ಯೆ ಉಗ್ರ ಹೋರಾಟ ನಡೆಯುತ್ತಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ
ದಟ್ಟ ಅರಣ್ಯದಲ್ಲಿರುವ ಉಗ್ರರ ಭದ್ರಕೋಟೆಯಾದ ಮುಲ್ಲೈತೀವು ಜಿಲ್ಲೆಯಲ್ಲಿರುವ ಉಗ್ರರ ಸರಬರಾಜು ಕೇಂದ್ರದ ಮೇಲೆ ಯುದ್ಧ ವಿಮಾನಗಳು ವೈಮಾನಿಕ ದಾಳಿ ನಡೆಸಿ ಧ್ವಂಸಗೊಳಿಸಿವೆ ಎಂದು ವಾಯುದಳದ ವಕ್ತಾರ ಕಮಾಂಡರ್ ಜನಕಾ ನನಯಕ್ಕರಾ ತಿಳಿಸಿದ್ದಾರೆ.
ಬಾಂಬ್ ದಾಳಿಯಲ್ಲಿ ಸಾವು ನೋವುಗಳಾದ ವರದಿಗಳು ಲಭ್ಯವಾಗಿಲ್ಲ. ಆದರೆ ಬಾಂಬ್ ದಾಳಿ ನಿಖರವಾಗಿದೆ ಎಂದು ವಿಮಾನಗಳ ಚಾಲಕರು ತಿಳಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
|