ಪ್ರಸಕ್ತ ವಾರದಲ್ಲಿ ಪೂರ್ವ ಟಿಬೆಟ್‌ನಲ್ಲಿ ಜನರ ಗುಂಪಿನ ಮೇಲೆ ಚೀನಾದ ಭದ್ರತಾ ಪಡೆಗಳು ಗುಂಡು ಹಾರಿಸಿ ಸುಮಾರು 140 ಜನರನ್ನು ಹತ್ಯೆ ಮಾಡಿವೆ ಎಂದು ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಆರೋಪಿಸಿದ್ದಾರೆ.
ಪೂರ್ವ ಟಿಬೆಟ್‌ನಲ್ಲಿರುವ ಖಾಮ್ ಪ್ರಾಂತ್ಯದಲ್ಲಿ ಅಗಸ್ಟ್ 18 ರಂದು ಚೀನಾದ ಸೇನಾಪಡೆಗಳು ಗುಂಡಿನ ದಾಳಿ ನಡೆಸಿ ಹಲವಾರು ಮಂದಿಯನ್ನು ಹತ್ಯೆ ಮಾಡಿದ್ದು 140 ಮಂದಿ ಹತ್ಯೆಯ ವರದಿಯಾಗಿದೆ ಎಂದು ದಲೈಲಾಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಿಂದ ಚೀನಾ ಅಡಳಿತವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಟಿಬೆಟಿಯನ್ ಜನರ ಮೇಲೆ ಚೀನಾ ದೌರ್ಜನ್ಯವೆಸಗುತ್ತಿದ್ದು ರಾಜಧಾನಿ ಲಾಸ್ಹಾ ಒಂದರಲ್ಲಿಯೇ ಸುಮಾರು 400 ಜನರ ಹತ್ಯೆ ಮಾಡಿದೆ ಎಂದು ದಲೈಲಾಮಾ ಆರೋಪಿಸಿದ್ದಾರೆ
ನಿಶಸ್ತ್ರ ಪ್ರತಿಭಟನಾಕಾರರ ಮೇಲೆ ಚೀನಾ ಗುಂಡಿನ ದಾಳಿಯನ್ನು ನಡೆಸುತ್ತಿದ್ದು ಮೃತ ದೇಹಗಳನ್ನು ಅವರ ಕುಟುಂಬಗಳಿಗೆ ಮರಳಿಸುತ್ತಿಲ್ಲ ಎಂದು ಫ್ರಾನ್ಸ್‌ಗೆ 12 ದಿನಗಳ ಭೇಟಿ ನೀಡಿರುವ ಟಿಬೆಟಿಯನ್ನರ ಧಾರ್ಮಿಕ ಗುರು ದಲೈಲಾಮಾ ಹೇಳಿದ್ದಾರೆ.
|