ವಾಷಿಂಗ್ಟನ್ : ಅಮೆರಿಕದ ಅಧ್ಯಕ್ಷ ಪದಾಕಾಂಕ್ಷಿ, ಡೆಮಾಕ್ರೆಟಿಕ್ ಅಭ್ಯರ್ಥಿ ಬರಾಕ್ ಒಬಾಮಾ , ಡೆಲವಾರೆ ಸೆನೆಟರ್ ಜೊಯಿ ಬಿಡೆನ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಶುಕ್ರವಾರದಂದು ಬರಾಕ್ ಒಬಾಮಾ, ರಕ್ಷಣಾ ಸಮಸ್ಯೆಗಳು ಹಾಗೂ ವಿದೇಶಾಂಗ ನೀತಿಗಳ ಬಗ್ಗೆ ಹೆಚ್ಚಿನ ಅನುಭವವಿರುವ ಹಿರಿಯ ಸೆನೆಟರ್ ಬಿಡೆನ್ ಅವರನ್ನು ಡೆಮಾಕ್ರೆಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಡೆಮಾಕ್ರೆಟಿಕ್ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಯಾಥೋಲಿಕ್ ಸಮುದಾಯದ ಡೆಲವಾರೆ ಬಿಡೆನ್, ವೈಟ್ ಹೌಸ್ನಲ್ಲಿ ಈ ಮೊದಲು ಎರಡು ಬಾರಿ ಕಾರ್ಯನಿರ್ವಹಿಸಿದ ಅನುಭವವಿದ್ದು ಹಿರಿಯ ಸದಸ್ಯರಾಗಿದ್ದಾರೆ ಎಂದು ಡೆಮಾಕ್ರೆಟಿಕ್ ಮೂಲಗಳು ತಿಳಿಸಿವೆ.
ಬಿಡೆನ್, ಸೆನೆಟ್ನಲ್ಲಿ 30 ವರ್ಷಕ್ಕೂ ಹೆಚ್ಚು ಕಾರ್ಯನಿರ್ವಹಿಸಿದ ಅನುಭವವಿದ್ದು, ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿ, ನ್ಯಾಯಾಧೀಕರಣದ ಸಮಿತಿಯ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಡೆಮಾಕ್ರೆಟಿಕ್ ಕಚೇರಿ ಪ್ರಕಟಿಸಿದೆ.
|