ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸೇನಾ ಕಾರ್ಯಾಚರಣೆ: 37 ಉಗ್ರರ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೇನಾ ಕಾರ್ಯಾಚರಣೆ: 37 ಉಗ್ರರ ಸಾವು
ಪಾಕಿಸ್ತಾನದ ಆಗ್ನೇಯ ಭಾಗದಲ್ಲಿರುವ ಸ್ವಾತ್ ಕಣಿವೆಯಲ್ಲಿ ಸೇನಾಪಡೆಗಳು ಸ್ಥಳೀಯ ತಾಲಿಬಾನ್ ಉಗ್ರರ ವಿರುದ್ದ ನಡೆಸಿದ ಕಾರ್ಯಾಚರಣೆಯಲ್ಲಿ 37 ಮಂದಿ ಉಗ್ರರು ಹತರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.

ದೇಶದಲ್ಲಿ ಹೆಚ್ಚುತ್ತಿರುವ ಉಗ್ರರ ಆತ್ಮಾಹುತಿ ಬಾಂಬ್‌‌ ದಾಳಿಗಳ ಹಿನ್ನೆಲೆಯಲ್ಲಿ ಸರಕಾರದ ಮೇಲೆ ಹೆಚ್ಚಿದ ಒತ್ತಡದಿಂದಾಗಿ ಉಗ್ರರ ತಾಣವಾದ ಸ್ವಾತ್ ಕಣಿವೆಯಲ್ಲಿ ಸೇನಾಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಶನಿವಾರದಂದು ಪ್ರವಾಸೋದ್ಯಮ ಕೇಂದ್ರವಾದ ಸ್ವಾತ್ ಕಣಿವೆಯಲ್ಲಿರುವ ಪೊಲೀಸ್ ಠಾಣೆಯ ಮೇಲೆ ಆತ್ಮಾಹುತಿ ಕಾರ್ ಬಾಂಬ್‌ ದಾಳಿ ನಡೆಸಿದಾಗ 6 ಮಂದಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದರು. ನಂತರ ರಸ್ತೆ ಬದಿ ಬಾಂಬ್‌ ಸ್ಫೋಟಿಸಿ ಒಬ್ಬ ನಾಗರಿಕ ಸೇರಿದಂತೆ ನಾಲ್ಕು ಮಂದಿ ಗಾಯಗೊಂಡಿದ್ದರು.

ಗುರುವಾರದಂದು ಸಶಸ್ತ್ರ ಕಾರ್ಖಾನೆಯ ದ್ವಾರದ ಬಳಿ ನಡೆದ ಆತ್ಮಹತ್ಯಾ ಅವಳಿ ಬಾಂಬ್‌‌ ದಾಳಿಯಲ್ಲಿ 67 ಮಂದಿ ಸಾವನ್ನಪ್ಪಿದ್ದು 100ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು.

ಅಫಘಾನ್ ಗಡಿಭಾಗದಲ್ಲಿರುವ ಪಾಕ್ ಬುಡಕಟ್ಟು ಪ್ರದೇಶಗಳಲ್ಲಿರುವ ತಾಲಿಬಾನಿಗಳ ವಿರುದ್ದ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸದಿದ್ದಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ತಾಲಿಬಾನ್ ವಕ್ತಾರ ಮುಸ್ಲಿಂ ಖಾನ್ ಎಚ್ಚರಿಕೆ ನೀಡಿ, ದೇಶದಾದ್ಯಂತ ಹಿಂಸಾಚಾರ ಮುಂದುವರಿಸುವುದಾಗಿ ಹೇಳಿಕೆ ನೀಡಿದ್ದು ಸರಕಾರ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದ.

ಸ್ವಾತ್ ಕಣಿವೆಯಲ್ಲಿ ನಡೆದ ಉಗ್ರರ ವಿರುದ್ದದ ಕಾರ್ಯಾಚರಣೆಯಲ್ಲಿ 37 ಉಗ್ರರು ಹಾಗೂ ಇಬ್ಬರು ಸೈನಿಕರು ಹತರಾಗಿದ್ದಾರೆ ಎಂದು ಸೇನಾ ವಕ್ತಾರ ಮೇಜರ್ ನಾಸೀರ್ ಅಲಿ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್ ಅಧ್ಯಕ್ಷ ಹುದ್ದೆಗೆ ಜರ್ದಾರಿ ಪಿಪಿಪಿ ಅಭ್ಯರ್ಥಿ
ಅಮೆರಿಕ : ಉಪಾಧ್ಯಕ್ಷ ಅಭ್ಯರ್ಥಿಯಾಗಿ ಬಿಡೆನ್ ಆಯ್ಕೆ
ಪಾಕ್ : ಆತ್ಮಾಹುತಿ ಬಾಂಬ್ ದಾಳಿಗೆ 20 ಮಂದಿ ಬಲಿ
ಚೀನಿಯರಿಂದ 140 ಟಿಬೆಟಿಯನ್ನರ ಹತ್ಯೆ-ಲಾಮಾ
ಶ್ರೀಲಂಕಾ: ಬಾಂಬ್ ದಾಳಿಯಲ್ಲಿ 24 ಉಗ್ರರ ಹತ್ಯೆ
ದಾವೂದ್‌ಗೆ ಐಎಸ್‌ಐ, ಪಾಕ್ ಸೇನೆಯ ಸಂಪರ್ಕ- ಖಾನ್