ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಜರ್ದಾರಿ ಸ್ಪರ್ಧೆ:ಮೈತ್ರಿಕೂಟದಲ್ಲಿ ಬಿಕ್ಕಟ್ಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ದಾರಿ ಸ್ಪರ್ಧೆ:ಮೈತ್ರಿಕೂಟದಲ್ಲಿ ಬಿಕ್ಕಟ್ಟು
ಇಸ್ಲಾಮಾಬಾದ್ : ಪಿಪಿಪಿ ಸಹಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸೆಪ್ಟೆಂಬರಿನಲ್ಲಿ ನಡೆಯಲಿರುವ 6ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಪದಚ್ಯುತ ನ್ಯಾಯಾಧೀಶರ ಮರುನೇಮಕದ ವಿಷಯವಾಗಿ ಆಡಳಿತಾರೂಢ ಮೈತ್ರಿ ತೀವ್ರ ಬಿಕ್ಕಟ್ಟಿನತ್ತ ಹೋಗುತ್ತಿರುವಂತೆ ಕಂಡು ಬರುತ್ತಿದೆ.

ಪಕ್ಷ ಒಮ್ಮತದಿಂದ ಆಸಿಫ್ ಅಲಿ ಜರ್ದಾರಿಯನ್ನು ರಾಷ್ಟ್ರಾಧ್ಯಕ್ಷ ಹುದ್ದೆಗೆ ಸ್ಪರ್ಧಿಸುವಲ್ಲಿ ಒತ್ತಾಯಿಸಿದ ಬಳಿಕ, ಅವರು ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿದ್ದಾರೆ ಎಂದು ಪಿಪಿಪಿ ಉಪ ಪ್ರಧಾನ ಕಾರ್ಯದರ್ಶಿ ರಾಜಾ ರಬ್ಬಾನಿ ತಿಳಿಸಿದ್ದಾರೆ.

ನಿನ್ನೆ ಪಾಕಿಸ್ತಾನದ ಆಡಳಿತಾರೂಢ ಪಿಪಿಪಿ ನಾಯಕರು ಅಧ್ಯಕ್ಷ ಹುದ್ದೆಗಾಗಿ ಜರ್ದಾರಿಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು.

ಆದರೆ ಇದೇ ವೇಳೆ, ಆಡಳಿತಾರೂಢ ಮೈತ್ರಿ ಎರಡನೇ ಅತ್ಯಂತ ದೊಡ್ಡ ಪಕ್ಷ ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ನ್ಯಾಯಾಧೀಶರ ಮರುನೇಮಕ ವಿಷಯವಾಗಿ ಬೆಂಬಲ ಹಿಂಪಡೆಯುವ ಬೆದರಿಕೆ ಒಡ್ಡಿದ್ದು ಸರಕಾರ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ.

ಲಾಹೋರ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು, ಸೋಮವಾರದ ವೇಳೆಗೆ ಪದಚ್ಯುತ ನ್ಯಾಯಾಧೀಶರನ್ನು ಮರುನೇಮಕ ಮಾಡುವುದೇ ಎಂಬುದಾಗಿ ಪಿಪಿಪಿ ಇಂದು ರಾತ್ರಿ ವೇಳೆಗೆ ತಿಳಿಸಬೇಕು ಎಂದು ಆಗ್ರಹಿಸಿದ್ದರು. ಅಧ್ಯಕ್ಷೀಯ ಹುದ್ದೆಗಾಗಿನ ಜರ್ದಾರಿ ಅಭ್ಯರ್ಥಿತನಕ್ಕೆ ಶರೀಫ್ ತಮ್ಮ ಪಕ್ಷದ ಬದ್ಧತೆಯನ್ನೂ ವ್ಯಕ್ತಪಡಿಸಿಲ್ಲ.

ಪದಚ್ಯುತ ನ್ಯಾಯಾಧೀಶರ ಮರುನೇಮಕಾತಿ ಸೂಕ್ಷ್ಮ ಕಾನೂನು ವಿಷಯವಾಗಿದ್ದು, ಪಿಪಿಪಿ ತನ್ನ ಎಲ್ಲಾ ಭರವಸೆಗಳನ್ನು ಪೂರೈಸುವುದು ಮತ್ತು ಈ ಸಮಸ್ಯೆಗೆ ಪರಿಹಾರವನ್ನು ಹುಡುಕಲಾಗುವುದು ಎಂದು ನಾಯಕ ರಬ್ಬಾನಿ ತಿಳಿಸಿದ್ದಾರೆ.
ಮತ್ತಷ್ಟು
ಜರ್ದಾರಿ ಅಧ್ಯಕ್ಷೀಯ ಸ್ಫರ್ಧೆಗೆ ಷರೀಫ್ ವಿರೋಧ
ಸೇನಾ ಕಾರ್ಯಾಚರಣೆ: 37 ಉಗ್ರರ ಸಾವು
ಪಾಕ್ ಅಧ್ಯಕ್ಷ ಹುದ್ದೆಗೆ ಜರ್ದಾರಿ ಪಿಪಿಪಿ ಅಭ್ಯರ್ಥಿ
ಅಮೆರಿಕ : ಉಪಾಧ್ಯಕ್ಷ ಅಭ್ಯರ್ಥಿಯಾಗಿ ಬಿಡೆನ್ ಆಯ್ಕೆ
ಪಾಕ್ : ಆತ್ಮಾಹುತಿ ಬಾಂಬ್ ದಾಳಿಗೆ 20 ಮಂದಿ ಬಲಿ
ಚೀನಿಯರಿಂದ 140 ಟಿಬೆಟಿಯನ್ನರ ಹತ್ಯೆ-ಲಾಮಾ