ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉಪಗ್ರಹ ಉಡಾವಣೆಗೆ ಸಿದ್ದ: ಅಹ್ಮದಿನೆಜಾದ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಪಗ್ರಹ ಉಡಾವಣೆಗೆ ಸಿದ್ದ: ಅಹ್ಮದಿನೆಜಾದ್
ಇರಾನ್‌ನಲ್ಲಿ ಸೆಟಲೈಟ ಅಭಿವೃದ್ಧಿ ಪಡಿಸುವ ತಂತ್ರಜ್ಞಾನವಿದ್ದು, ಶೀಘ್ರದಲ್ಲೇ ಬಾಹ್ಯಾಕಾಶಕ್ಕೆ ಸಂವಹನ ಉಪಗ್ರಹವನ್ನು ಹಾರಿಬಿಡಲಾಗುವುದು ಎಂದು ಅಧ್ಯಕ್ಷ ಮೊಹಮೌದ್ ಅಹ್ಮದಿನೆಜಾದ್ ತಿಳಿಸಿದ್ದಾರೆ.

ಉಪಗ್ರಹವನ್ನು ನಿರ್ಮಿಸಲು ಇರಾನ್ ತಂತ್ರಜ್ಞಾನವನ್ನು ಪಡೆದಿದ್ದು, ಬಾಹ್ಯಾಕಾಶಕ್ಕೆ ತನ್ನ ಮೊದಲ ದೂರ ಸಂವೇದಿ ದೂರಸಂಪರ್ಕ ಉಪಗ್ರಹವನ್ನು ಹಾರಿಬಿಡಲು ತನ್ನ ತಂತ್ರಜ್ಞಾನವನ್ನು ಉಪಯೋಗಿಸಲಿದೆ ಎಂದು ಅಧ್ಯಕ್ಷ ಅಹ್ಮದಿನೆಜಾದ್ ಕೇಂದ್ರ ಇರಾನ್ ಪ್ರಾಂತ್ಯ ಅರಕ್‌ನಲ್ಲಿ ಸೇರಿದ ಸಭೆಯನ್ನು ಉದ್ದೇಶಿಸಿ ಹೇಳಿದರು.

ತಮ್ಮ ವಿಜ್ಞಾನಿಗಳಿಂದ ಅಭಿವೃದ್ಧಿ ಪಡಿಸಲಾದ ಈ ಉಪಗ್ರಹ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಪಾಶ್ಚಿಮಾತ್ಯ ರಾಷ್ಟ್ರಗಳು ಹೇರಿದ ನಿಷೇಧಗಳು ಇರಾನ್‌ನ ರಾಕೆಟ್ ಮತ್ತು ಬಾಹ್ಯಕಾಶ ಅನ್ವಯಕಗಳಲ್ಲಿನ ಸುಧಾರಣೆಗೆ ಅಡಚಣೆಯಾಗಲೇ ಇಲ್ಲ ಎಂದು ಅವರು ಹೇಳಿದರು. ನೀವು ಇರಾನ್ ಮೇಲೆ ನಿಷೇಧ ಹೇರಿದಿರಿ ಆದರೆ ನಮ್ಮ ರಾಷ್ಟ್ರ ಈಗ ಬಾಹ್ಯಾಕಾಶಕ್ಕೆ ರಾಕೆಟ್ ಹಾರಿಬಿಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಶೀಘ್ರದಲ್ಲೇ ತಮ್ಮ ಸಾಮರ್ಥ್ಯವನ್ನು ಉಪಯೋಗಿಸಲಿದ್ದೇವೆ ಎಂದು ತಿಳಿಸಿದರು.
ಮತ್ತಷ್ಟು
ಜರ್ದಾರಿ ಸ್ಪರ್ಧೆ:ಮೈತ್ರಿಕೂಟದಲ್ಲಿ ಬಿಕ್ಕಟ್ಟು
ಜರ್ದಾರಿ ಅಧ್ಯಕ್ಷೀಯ ಸ್ಫರ್ಧೆಗೆ ಷರೀಫ್ ವಿರೋಧ
ಸೇನಾ ಕಾರ್ಯಾಚರಣೆ: 37 ಉಗ್ರರ ಸಾವು
ಪಾಕ್ ಅಧ್ಯಕ್ಷ ಹುದ್ದೆಗೆ ಜರ್ದಾರಿ ಪಿಪಿಪಿ ಅಭ್ಯರ್ಥಿ
ಅಮೆರಿಕ : ಉಪಾಧ್ಯಕ್ಷ ಅಭ್ಯರ್ಥಿಯಾಗಿ ಬಿಡೆನ್ ಆಯ್ಕೆ
ಪಾಕ್ : ಆತ್ಮಾಹುತಿ ಬಾಂಬ್ ದಾಳಿಗೆ 20 ಮಂದಿ ಬಲಿ