ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಶರೀಫ್ ಗಡುವು ಅಂತ್ಯ: ಪಾಕ್ ಸರಕಾರ ಪತನ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶರೀಫ್ ಗಡುವು ಅಂತ್ಯ: ಪಾಕ್ ಸರಕಾರ ಪತನ?
ಮಾಜಿ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ಅವರಿಂದ ಪದಚ್ಯುತಗೊಂಡಿದ್ದ ನ್ಯಾಯಾಧೀಶರನ್ನು ಮರುನೇಮಿಸದಿದ್ದರೆ ಸಮ್ಮಿಶ್ರ ಸರಕಾರವು ಹೊರಬರುವುದಾಗಿ ಪಾಕ್ ಸರಕಾರಕ್ಕೆ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್) ನೀಡಿರುವ ಗಡುವು ಸೋಮವಾರಕ್ಕೆ ಕೊನೆಗೊಳ್ಳಲಿದ್ದು, ಪಾಕ್ ಸರಕಾರ ಪತನದ ಅಂಚಿನಲ್ಲಿದೆ.

ಫೆಡರಲ್ ಮತ್ತು ಪ್ರಾಂತೀಯ ಸರಕಾರಗಳು ಹೊಸ ಅಧ್ಯಕ್ಷರನ್ನು ಸೆ.6ರಂದು ಆರಿಸಲಿವೆ ಎಂಬ ನಿರ್ಧಾರ ಹೊರಬಿದ್ದ ಬೆನ್ನಿಗೇ, ನ್ಯಾಯಾಧೀಶರ ಮರುನೇಮಕಕ್ಕೆ ಸಮ್ಮಿಶ್ರ ಸರಕಾರದ ಎರಡನೇ ಅತಿದೊಡ್ಡ ಪಕ್ಷವಾದ ಪಿಎಂಎಲ್ ಅಧ್ಯಕ್ಷ, ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಸೋಮವಾರದ ಗಡುವು ವಿಧಿಸಿದ್ದರು.

ಸಮ್ಮಿಶ್ರ ಸರಕಾರದ ನೇತೃತ್ವ ವಹಿಸಿರುವ ಪಕ್ಷವಾದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಾಯಕ, ಹತ್ಯೆಗೀಡಾದ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಅವರ ಪತಿ ಆಸಿಫ್ ಅಲಿ ಜರ್ದಾರಿ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಶನಿವಾರ ದೃಢಪಡಿಸಿದ್ದರು.

ಇದೀಗ ಪಾಕಿಸ್ತಾನದ ರಾಜಕೀಯ ಅಸ್ಥಿರತೆಯು ಕೇವಲ ಪಾಕಿಸ್ತಾನಿಯರಿಗಷ್ಟೇ ಅಲ್ಲ, ಪಾಕಿಸ್ತಾನದ ಹೊರಗಿನ ಮಿತ್ರ ರಾಷ್ಟ್ರಗಳಿಗೂ ಕಳವಳ ಉಂಟುಮಾಡಿದೆ. ರಾಜಕೀಯ ಅಸ್ಥಿರತೆಯಿಂದ ಭಯೋತ್ಪಾದಕರ ಮೇಲುಗೈ ಮತ್ತು ಗಂಭೀರ ಆರ್ಥಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ ಎಂಬುದು ಅವರ ಆತಂಕ.

ಆಡಳಿತಾರೂಢ ಪಕ್ಷದ ನಾಯಕ ಜರ್ದಾರಿಗೆ ದೊರೆಯುವ ಅಧಿಕಾರದ ಮೇಲೆ ಗಮನ ಹರಿಸಿದರೂ, ಹೆಚ್ಚಿನ ಪಾಕಿಸ್ತಾನೀಯರು ಅವರಕನ್ನು ಭ್ರಷ್ಟ ಎಂಬ ಶಂಕೆಯಿಂದಲೇ ನೋಡುತ್ತಿದ್ದಾರೆ. ಮಂಗಳವಾರ ಅಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಕೊನೆ ದಿನ. ಸರಕಾರವು ನ್ಯಾಯಾಧೀಶರ ಮರುನೇಮಕದ ವಿಷಯದಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಶರೀಫ್ ಪಕ್ಷವೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಣಯವೂ ಅವಲಂಬಿಸಿದೆ.

ಸಮ್ಮಿಶ್ರ ಸರಕಾರದಿಂದ ಹೊರಬಂದು ಜರ್ದಾರಿ ಅಭ್ಯರ್ಥಿತನವನ್ನು ವಿರೋಧಿಸುವುದೇ ಎಂಬ ಬಗ್ಗೆ ಪಿಎಂಎಲ್ ಪಕ್ಷವು ಇಂದು ಸಭೆ ಸೇರಿ ನಿರ್ಧಾರ ಕೈಗೊಳ್ಳಲಿದೆ.
ಮತ್ತಷ್ಟು
ಪಾಕ್ : ಘರ್ಷಣೆಯಲ್ಲಿ 65 ಮಂದಿ ಸಾವು
ಪಿಪಿಪಿ ಅಧ್ಯಕ್ಷ ಅಭ್ಯರ್ಥಿಯಾಗಿ ಜರ್ದಾರಿ
ಉಪಗ್ರಹ ಉಡಾವಣೆಗೆ ಸಿದ್ದ: ಅಹ್ಮದಿನೆಜಾದ್
ಜರ್ದಾರಿ ಸ್ಪರ್ಧೆ:ಮೈತ್ರಿಕೂಟದಲ್ಲಿ ಬಿಕ್ಕಟ್ಟು
ಜರ್ದಾರಿ ಅಧ್ಯಕ್ಷೀಯ ಸ್ಫರ್ಧೆಗೆ ಷರೀಫ್ ವಿರೋಧ
ಸೇನಾ ಕಾರ್ಯಾಚರಣೆ: 37 ಉಗ್ರರ ಸಾವು