ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಕಿರ್ಗಿಸ್ತಾನ ವಿಮಾನ ಪತನ: 70 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಿರ್ಗಿಸ್ತಾನ ವಿಮಾನ ಪತನ: 70 ಸಾವು
ಈಶಾನ್ಯ ಇರಾನ್‌ನ ಮಷಾದ್‌ನತ್ತ ತೆರಳುತ್ತಿದ್ದ ಕಿರ್ಗಿಸ್ತಾನದ ವಿಮಾನವೊಂದು ಸೋಮವಾರ ಪತನಗೊಂಡು ಕನಿಷ್ಠ 70 ಪ್ರಯಾಣಿಕರು ದುರಂತ ಸಾವನ್ನಪ್ಪಿದ್ದಾರೆ.

ಬೋಯಿಂಗ್ -737 ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆಂದು ವಿಮಾನದಲ್ಲಿದ್ದ ಸಿಬ್ಬಂದಿ ಸಂದೇಶ ರವಾನಿಸಿದ್ದರು ಮತ್ತು ವಿಮಾನವನ್ನು ಮಾನಾಸ್‌ಗೆ ಮರಳಿಸುತ್ತಿದ್ದರು. ಆದರೆ ಮಾನಾಸ್‌ಗೆ 2 ಕಿ.ಮೀ. ಸಮೀಪ ಬರುತ್ತಿದ್ದಂತೆಯೇ ವಿಮಾನವು ಪತನವಾಗಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು ಎಂದು ಮೂಲಗಳು ತಿಳಿಸಿವೆ. ಈ ದುರಂತದಲ್ಲಿ ಕೇವಲ 20 ಮಂದಿ ಮಾತ್ರ ಬದುಕುಳಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

ವಿಮಾನದಲ್ಲಿ ಕಿರ್ಗಿಸ್ತಾನದ ಬಾಸ್ಕೆಟ್‌ಬಾಲ್ ಯುವತಂಡವೂ ಸೇರಿದಂತೆ 83 ಪ್ರಯಾಣಿಕರಿದ್ದರು ಹಾಗೂ 7 ಮಂದಿ ಸಿಬ್ಬಂದಿ ಇದ್ದರು. ಆದರೆ ಒಟ್ಟು ಪ್ರಯಾಣಿಕರ ಸಂಖ್ಯೆ ಎಷ್ಟೆಂಬುದರ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರಕಿಲ್ಲ. ವಿಮಾನದ ಕ್ಯಾಪ್ಟನ್ ಕೂಡ ಪಾರಾಗಿದ್ದಾರೆ ಎಂದು ಕಿರ್ಗಿಸ್ತಾನ ಪ್ರಧಾನಿ ಐಗರ್ ಚುಡಿನೊವ್ ತಿಳಿಸಿದ್ದಾರೆ. ಈ ವಿಮಾನವು ಕಿರ್ಗಿಸ್ ಸಂಸ್ಥೆಯಾದ ಐಟೆಕ್ ಏರ್‌ಗೆ ಸೇರಿದ್ದಾಗಿದೆಯಾದರೂ, ಇದನ್ನು ಇರಾನ್ ಅಸೆಮಾನ್ ಏರ್‌ಲೈನ್ಸ್ ಕಂಪನಿಯು ನಿರ್ವಹಿಸುತ್ತಿತ್ತು. ಸುರಕ್ಷತಾ ಕಾರಣಗಳಿಗಾಗಿ ಐಟೆಕ್ ಏರ್ ವಿಮಾನಗಳಿಗೆ ಯೂರೋಪಿಯನ್ ಒಕ್ಕೂಟವು ನಿಷೇಧ ವಿಧಿಸಿತ್ತು.

ಪರಿಹಾರ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.
ಮತ್ತಷ್ಟು
ಶರೀಫ್ ಗಡುವು ಅಂತ್ಯ: ಪಾಕ್ ಸರಕಾರ ಪತನ?
ಪಾಕ್ : ಘರ್ಷಣೆಯಲ್ಲಿ 65 ಮಂದಿ ಸಾವು
ಪಿಪಿಪಿ ಅಧ್ಯಕ್ಷ ಅಭ್ಯರ್ಥಿಯಾಗಿ ಜರ್ದಾರಿ
ಉಪಗ್ರಹ ಉಡಾವಣೆಗೆ ಸಿದ್ದ: ಅಹ್ಮದಿನೆಜಾದ್
ಜರ್ದಾರಿ ಸ್ಪರ್ಧೆ:ಮೈತ್ರಿಕೂಟದಲ್ಲಿ ಬಿಕ್ಕಟ್ಟು
ಜರ್ದಾರಿ ಅಧ್ಯಕ್ಷೀಯ ಸ್ಫರ್ಧೆಗೆ ಷರೀಫ್ ವಿರೋಧ