ಪ್ರಸಕ್ತ 45 ರಾಷ್ಟ್ರಗಳ ಪರಮಾಣು ಪೂರೈಕಾ ಸಮೂಹದ ಅಭಿಪ್ರಾಯದ ಮೇಲೆ ನಿಂತಿರುವ ಭಾರತ ಅಮೆರಿಕ ಪರಮಾಣು ಒಪ್ಪಂದವು ದೇಶದ ಪ್ರಾಥಮಿಕ ಕೇಂದ್ರಬಿಂದುವಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಹೇಳಿದ್ದಾರೆ.
ಜಾರ್ಜಿಯಾದಲ್ಲಿನ ಬೆಳವಣಿಗೆಗಳು ಅಮೆರಿಕ ರಶ್ಯಾ ನಾಗರಿಕ ಪರಮಾಣು ಒಪ್ಪಂದದ ಮೇಲೆ ಪರಿಣಾಮ ಬೀರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ರೈಸ್, ಅಮೆರಿಕ ಪರಮಾಣು ವಾಣಿಜ್ಯ ನೀತಿಯ ಪ್ರಥಮ ಕೇಂದ್ರಬಿಂದು ಭಾರತದೊಂದಿಗಿನ ಅಣು ಒಪ್ಪಂದವೇ ಹೊರತು ರಶ್ಯಾದೊಂದಿಗಿನ ಒಪ್ಪಂದವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದೊಂದಿಗಿನ ಅಣು ಒಪ್ಪಂದದಲ್ಲಿ ದೇಶದ ದೃಷ್ಟಿಯು ಕೇಂದ್ರೀಕತವಾಗಿದೆ. ಐಎಇಎ ಅನುಮೋದನೆ ಪಡೆದುಕೊಂಡಿದ್ದು, ಈಗ ಎನ್ಎಸ್‌ಜಿ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ರೈಸ್ ಹೇಳಿದ್ದಾರೆ.
ಅದಾಗ್ಯೂ, ಈಗಾಗಲೇ ಕಾಂಗ್ರೆಸ್‌ನೊಂದಿಗೆ ಪ್ರಸ್ತಾಪಿಸಲ್ಪಟ್ಟ ಅಮೆರಿಕ ರಶ್ಯಾ ನಾಗರಿಕ ಪರಮಾಣು ಒಪ್ಪಂದದ ಮೇಲೆ ಜಾರ್ಜಿಯಾದಲ್ಲಿ ರಶ್ಯಾದ ಸೇನಾ ಕ್ರಮಗಳಿಂದ ಪ್ರಭಾವ ಬೀರುವ ಸಾಧ್ಯತೆಯ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
|