ಭಾರತಕ್ಕೆ ಸಮೀಪವಿರುವ ದಕ್ಷಿಣ ಟಿಬೆಟಿನ ಜೋಂಗ್ಬಾ ಪ್ರಾಂತ್ಯದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಸಾವು ನೋವಿನ ವರದಿಯಾಗಿಲ್ಲ.
ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.8ರಷ್ಟಿತ್ತು ಎಂದು ಮೂಲಗಳು ತಿಳಿಸಿವೆ.
ಉತ್ತರ ಅಕ್ಷಾಂಕ್ಷದಲ್ಲಿ 31.0ಡಿಗ್ರಿಯಲ್ಲಿ ಮತ್ತು ಪೂರ್ವ ರೇಖಾಂಶದಲ್ಲಿ 83.6 ಡಿಗ್ರಿಯಲ್ಲಿ ಭೂಕಂಪ ಪ್ರದೇಶವು ಹತ್ತು ಕಿ.ಮೀಗಳಷ್ಟು ಆಳಕ್ಕಿಳಿದಿತ್ತು ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಭೂಕಂಪದಿಂದ ಸಾವು ನೋವು ಉಂಟಾಗಿರುವ ಬಗ್ಗೆ ಇಲ್ಲಿಯವರೆಗೆ ಯಾವುದೇ ವರದಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.
ಈ ನಡುವೆ, ಕಳೆದ ವಾರ ನೈಋತ್ಯ ಚೀನಾದ ಯುನಾನ್ ಪ್ರಾಂತ್ಯದಲ್ಲಿ ಉಂಟಾಗಿದ್ದ ಭೂಕಂಪದಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿದೆ ಎಂದು ಸ್ಥಳೀಯ ಸರಕಾರವು ಹೇಳಿದೆ.
|