ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮಾ ಹತ್ಯೆಗೆ ಸಂಚು: ನಾಲ್ವರ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ ಹತ್ಯೆಗೆ ಸಂಚು: ನಾಲ್ವರ ಬಂಧನ
ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಅವರ ಹತ್ಯೆಗೆ ಸಂಚು ರೂಪಿಸಿದ್ದ ನಾಲ್ಕು ಮಂದಿಯನ್ನು ಡೆನ್ವರ್‌ನಲ್ಲಿ ಬಂಧಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ರೈಫಲ್‌ ಉಪಯೋಗಿಸಿ ಒಬಾಮಾ ಅವರ ಮೇಲೆ ಗುಂಡು ಹಾರಿಸಲು ಸಂಚು ರೂಪಿಸಿದ್ದಾಗಿ ಬಂಧಿತರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಡೆಮಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಬರಾಕ್ ಒಬಾಮಾ ಅವರು ಗುರುವಾರದಂದು ಇನ್ವೆಸ್ಕೋ ಸ್ಟೇಡಿಯಂನಲ್ಲಿ ನಾಮಪತ್ರ ಸಲ್ಲಿಸಲಿದ್ದು, ಈ ವೇಳೆ ಹತ್ಯೆ ಕಾರ್ಯವೆಸಗಲು ಸಂಚುರೂಪಿಸಿದ್ದಾಗಿ ಬಂಧಿತರು ಹೇಳಿರುವುದಾಗಿ ಮಾಧ್ಯಮಗಳು ಉಲ್ಲೇಖಿಸಿವೆ.

ಬಾಡಿಗೆಯ ಪಿಕ್‌ಅಪ್ ಟ್ರಕ್‌ನಲ್ಲಿ ಉನ್ನತ ಶಕ್ತಿಯ ರೈಫಲ್‌ ಕಂಡುಬಂದ ಹಿನ್ನೆಲೆಯಲ್ಲಿ ಒಬ್ಬನನ್ನು ಪೊಲೀಸರು ರವಿವಾರ ಬಂಧಿಸಿದ್ದರು.

ಘಟನೆಯ ಸಂಬಂಧ ಚರ್ಚೆ ನಡೆಸಲು ಡೆನ್ವೆರ್‌ನ ಅಮೆರಿಕ ಅಟರ್ನರಿ ಕಚೇರಿಯಲ್ಲಿ ಮಂಗಳವಾರ ಸಭೆ ನಡೆಯಲಿದೆಯಾದರೂ, ಒಬಾಮಾ ಅವರ ಮೇಲಿನ ಹತ್ಯೆ ಬೆದರಿಕೆಯ ಸಾಧ್ಯತೆಯನ್ನು ಅಟರ್ನರಿ ಟ್ರಾಯ್ ಈದ್ ತಳ್ಳಿಹಾಕಿದ್ದಾರೆ.
ಮತ್ತಷ್ಟು
ಟಿಬೆಟಿನಲ್ಲಿ ಪ್ರಬಲ ಭೂಕಂಪನ
ಭಾರತದೊಂದಿಗೆ ಅಣು ಒಪ್ಪಂದ ಮೊದಲ ಗುರಿ: ರೈಸ್
ಶರೀಫ್ ಬೆಂಬಲ ಹಿಂತೆಗೆತ: ಅಲ್ಪಮತಕ್ಕಿಳಿದ ಪಾಕ್ ಸರಕಾರ
ಪಾಕಿಸ್ತಾನದಲ್ಲಿ ತಾಲಿಬಾನ್ ಸಂಘಟನೆ ನಿಷೇಧ
ಕಾದಿರುವಳು ತಾಯಿ, ಭಾರತದಿಂದ ಮಗ ಬರುವನೆಂದು!
ಕಿರ್ಗಿಸ್ತಾನ ವಿಮಾನ ಪತನ: 70 ಸಾವು