ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಮೂರು ಮಂದಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನದ ಝಫರಾಬಾದ್ ಜಿಲ್ಲೆಯಲ್ಲಿ ರಾಜಕೀಯ ರ‌್ಯಾಲಿಯ ಸಮೀಪದ ಅಂಗಡಿ ಬಳಿ ರಿಮೋಟ್ ನಿಯಂತ್ರಿತ ಸ್ಫೋಟ ಸಂಭವಿಸಿದೆ ಎಂದು ಮಾಧ್ಯಮಗಳು ಹೇಳಿವೆ.
ಬಾಂಬ್ ಸ್ಫೋಟಗೊಂಡ ವೇಳೆ, ಜಮೂರಿ ವತನ್ ಪಕ್ಷವು ರ‌್ಯಾಲಿಯನ್ನು ನಡೆಸುತ್ತಿತ್ತು. ಸ್ಫೋಟದಿಂದಾಗಿ ಮೂರು ಮಂದಿ ಮೃತಪಡುವುದರೊಂದಿಗೆ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೋಟಾರ್ ಸೈಕಲ್ ಒಂದರಲ್ಲಿ ಬಾಂಬ್ ಇರಿಸಲಾಗಿದ್ದು, ಪಕ್ಷದ ಕಾರ್ಯಕರ್ತರ ಜಾಥಾ ವೇಳೆ ಬಾಂಬ್ ಸ್ಫೋಟಗೊಂಡಿತು.
|