ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ವಿಶ್ವದ ಮೂರನೇ ಒಂದಂಶ ಬಡವರು ಭಾರತದಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವದ ಮೂರನೇ ಒಂದಂಶ ಬಡವರು ಭಾರತದಲ್ಲಿ
ವಿಶ್ವದ ಮೂರನೇ ಒಂದಂಶದಷ್ಟು ಬಡವರು ಭಾರತದಲ್ಲಿದ್ದಾರೆ ಎಂದು ವಿಶ್ವ ಬ್ಯಾಂಕು ಹೇಳಿದೆ. ಜಗತ್ತಿನ ಎಲ್ಲಾ ಬಡವರ್ಗದ ಜನರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಭಾರತದಲ್ಲಿ ನೆಲೆಸಿದ್ದು, ದಿನವೊಂದರ ಎರಡು ಡಾಲರ್‌ಗಿಂತಲೂ ಕಡಿಮೆ ಆದಾಯ ಹೊಂದಿರುವ ಮಂದಿಯ ಪ್ರಮಾಣವು ಭಾರತದಲ್ಲಿ ಹೆಚ್ಚಾಗಿದೆ ಎಂದು ವಿಶ್ವಬ್ಯಾಂಕಿನ ಜಾಗತಿಕ ಬಡತನದ ಕುರಿತ ಅಂದಾಜು ವರದಿಗಳು ತಿಳಿಸಿವೆ.

1990 ಮತ್ತು 2005ರ ಅವಧಿಗಿಂತ 1981 ಮತ್ತು 1990ರ ಅವಧಿಯಲ್ಲಿ ಭಾರತದಲ್ಲಿ ಬಡತನದ ಪ್ರಮಾಣದಲ್ಲಿ ಏರಿಕೆ ಉಂಟಾಗಿದ್ದು, ಇದು 1991ರಲ್ಲಿ ಪ್ರಾರಂಭಗೊಂಡ ಆರ್ಥಿಕ ಸುಧಾರಣೆಗಳು ಬಡತನವನ್ನು ಶೀಘ್ರಪಥದಲ್ಲಿ ತೊಲಗಿಸಲು ವಿಫಲವಾಗಿರುವುದನ್ನು ಸೂಚಿಸುತ್ತದೆ ಎಂದು ವಿಶ್ವಬ್ಯಾಂಕ್ ಸ್ಪಷ್ಟಪಡಿಸಿದೆ.

ನೂತನ ಅಂದಾಜಿನ ಪ್ರಕಾರ, ಭಾರತದಲ್ಲಿ 456 ದಶಲಕ್ಷ ಮಂದಿ ಅಥವಾ ಒಟ್ಟು ಜನಸಂಖ್ಯೆಯ ಶೇ.42ರಷ್ಟು ಮಂದಿ ಬಡತನದ ರೇಖೆಗಿಂತ ಕೆಳಮಟ್ಟದಲ್ಲಿ ವಾಸಿಸುತ್ತಿದ್ದಾರೆ. ಅಲ್ಲದೆ, ಒಟ್ಟಾರೆ ಜಗತ್ತಿನ ಬಡವರಲ್ಲಿ ಶೇ.33ರಷ್ಟು ಬಡಜನರನ್ನು ಭಾರತವು ಹೊಂದಿದೆ.

ಅಲ್ಲದೆ, ಭಾರತದಲ್ಲಿ ಪ್ರತಿದಿನ ಎರಡು ಡಾಲರ್‌ಗಿಂತಲೂ ಕಡಿಮೆ ಆದಾಯ ಹೊಂದಿರುವವರ ಪ್ರಮಾಣವು ಶೇ.75.6ರಷ್ಟಿದ್ದು, ಇದು ಜಗತ್ತಿನ ಅತಿ ಬಡ ಪ್ರದೇಶ ಎಂದು ಪರಿಗಣಿಸಲ್ಪಟ್ಟ ಸಬ್ ಸಹರನ್ ಆಫ್ರಿಕಾದಲ್ಲಿನ ಶೇ.72.2ಬಡತನ ಪ್ರಮಾಣಕ್ಕಿಂತಲೂ ಹೆಚ್ಚಾಗಿದೆ.
ಮತ್ತಷ್ಟು
ನವಾಜ್ ಷರೀಫ್ ಕ್ಷಮೆ ಯಾಚಿಸಿದ ಜರ್ದಾರಿ
ಪಾಕ್ ಬಾಂಬ್ ಸ್ಫೋಟ: 3 ಸಾವು
ಒಬಾಮಾ ಹತ್ಯೆಗೆ ಸಂಚು: ನಾಲ್ವರ ಬಂಧನ
ಟಿಬೆಟಿನಲ್ಲಿ ಪ್ರಬಲ ಭೂಕಂಪನ
ಭಾರತದೊಂದಿಗೆ ಅಣು ಒಪ್ಪಂದ ಮೊದಲ ಗುರಿ: ರೈಸ್
ಶರೀಫ್ ಬೆಂಬಲ ಹಿಂತೆಗೆತ: ಅಲ್ಪಮತಕ್ಕಿಳಿದ ಪಾಕ್ ಸರಕಾರ