ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮೆರಿಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮೆರಿಕ
ಪರಮಾಣು ವ್ಯವಹಾರಕ್ಕಾಗಿ ಭಾರತಕ್ಕೆ ವಿನಾಯತಿ ನೀಡುವ ಕುರಿತಾದ ಪರಮಾಣು ಪೂರೈಕೆ ರಾಷ್ತ್ರಗಳ ಕಳವಳ ಸಂಬಂಧ ಭಾರತ ಅಮೆರಿಕ ಪರಮಾಣು ಒಪ್ಪಂದದಲ್ಲಿ ಯಾವುದೇ ಬದಲಾವಣೆಯನ್ನು ಮಾಡುವ ಯೋಜನೆ ಇಲ್ಲ ಎಂದು ಅಮೆರಿಕವು ಸ್ಪಷ್ಟಪಡಿಸಿದೆ.

ಭಾರತದೊಂದಿಗಿನ ನಾಗರಿಕ ಪರಮಾಣು ಒಪ್ಪಂದವು ಕಾರ್ಯೂರೂಪಕ್ಕೆ ಬರಲು ಬುಷ್ ಆಡಳಿತವು ಕಾರ್ಯನಿರ್ವಹಿಸುತ್ತಿದೆ ಎಂದು ವಿದೇಶಾಂಗ ವಿಭಾಗದ ವಕ್ತಾರ ರೋಬರ್ಟ್ ವುಡ್ ಹೇಳಿದ್ದಾರೆ.

ಭಾರತ ಅಮೆರಿಕ ಪರಮಾಣು ಒಪ್ಪಂದದಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುವ ಯೋಜನೆಯನ್ನು ಬುಷ್ ಆಡಳಿತವು ಹೊಂದಿಲ್ಲ ಎಂದು ವುಡ್ ಸ್ಪಷ್ಟಪಡಿಸಿದ್ದಾರೆ.

ಈ ಒಪ್ಪಂದವು ಅಮೆರಿಕ ಮತ್ತು ಭಾರತಕ್ಕೆ ಅತ್ಯಂತ ಪ್ರಾಮುಖ್ಯವಾಗಿದೆ ಎಂಬ ನಿಲುವಿನಲ್ಲಿ ಅಮೆರಿಕವು ಈ ಒಪ್ಪಂದವನ್ನು ಕಾಣಲು ಬಯಸುತ್ತದೆ ಎಂದು ವುಡ್ ಒತ್ತಿ ಹೇಳಿದರು.

ಎನ್ಎಸ್‌ಜಿ ರಾಷ್ಟ್ರಗಳಿಂದ ಉಂಟಾಗುವ ಸಮಸ್ಯೆಗಳನ್ನು ಮಾತುಕತೆಯಿಂದ ಬಗೆಹರಿಸಲಾಗುವುದು ಎಂದು ವುಡ್ ಹೇಳಿದ್ದಾರೆ.
ಮತ್ತಷ್ಟು
ವಿಶ್ವದ ಮೂರನೇ ಒಂದಂಶ ಬಡವರು ಭಾರತದಲ್ಲಿ
ನವಾಜ್ ಷರೀಫ್ ಕ್ಷಮೆ ಯಾಚಿಸಿದ ಜರ್ದಾರಿ
ಪಾಕ್ ಬಾಂಬ್ ಸ್ಫೋಟ: 3 ಸಾವು
ಒಬಾಮಾ ಹತ್ಯೆಗೆ ಸಂಚು: ನಾಲ್ವರ ಬಂಧನ
ಟಿಬೆಟಿನಲ್ಲಿ ಪ್ರಬಲ ಭೂಕಂಪನ
ಭಾರತದೊಂದಿಗೆ ಅಣು ಒಪ್ಪಂದ ಮೊದಲ ಗುರಿ: ರೈಸ್