ಪರಸ್ಪರ ಅಪರಾಧಿಗಳ ಹಸ್ತಾಂತರಕ್ಕಾಗಿ ದ್ವಿಪಕ್ಷೀಯ ಗಡೀಪಾರು ಒಪ್ಪಂದದ ಕುರಿತ ಭಾರತದ ಪ್ರಸ್ತಾಪವನ್ನು ಬಾಂಗ್ಲಾದೇಶವು ಮತ್ತೊಮ್ಮೆ ತಳ್ಳಿ ಹಾಕಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆಗಳು ವರದಿ ಮಾಡಿವೆ.
ಇಂತಹ ಒಪ್ಪಂದದಲ್ಲಿ ಸಾರ್ಕ್‌ನ ಇತರ ರಾಷ್ಟ್ರಗಳೂ ಭಾಗಿಯಾಗಬೇಕೆಂದು ಢಾಕಾ ಒತ್ತಾಯಿಸಿದೆ.
ಬಾಂಗ್ಲಾದೇಶ ಮತ್ತು ಭಾರತದ ನಡುವಿನ ಮೂರು ದಿನಗಳ ಒಂಭತ್ತನೇ ಕಾರ್ಯದರ್ಶಿ ಮಟ್ಟದ ಸಭೆಯು ಢಾಕಾದಲ್ಲಿ ಶುಕ್ರವಾರ ಪ್ರಾರಂಭಗೊಳ್ಳಲಿದ್ದು, ಈ ಸಭೆಯಲ್ಲಿ ಭಾರತವು ಗಡೀಪಾರು ಒಪ್ಪಂದಕ್ಕಾಗಿ ಮತ್ತೊಮ್ಮೆ ಬಾಂಗ್ಲಾದೇಶದ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ ಎಂದು ದಿನಪತ್ರಿಕೆಗಳು ವರದಿ ಮಾಡಿವೆ.
ಬಾಂಗ್ಲಾದೇಶದೊಂದಿಗೆ ಗಡೀಪಾರು ಒಪ್ಪಂದಕ್ಕೆ ಸಹಿ ಹಾಕಲು ಭಾರತ ಆಸಕ್ತಿ ಹೊಂದಿದೆಯಾದರೂ, ಬಾಂಗ್ಲಾದೇಶವು ಈ ವಿಚಾರದಲ್ಲಿ ನಿರಾಸಕ್ತಿಯನ್ನು ತೋರುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.
|