ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್: 8 ಪದಚ್ಯುತ ನ್ಯಾಯಾಧೀಶರ ಮರುನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್: 8 ಪದಚ್ಯುತ ನ್ಯಾಯಾಧೀಶರ ಮರುನೇಮಕ
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಸರ್ವಾಧಿಕಾರದ ಅವಧಿಯಲ್ಲಿ ಉಚ್ಚಾಟಿತಗೊಂಡ 60 ನ್ಯಾಯಾಧೀಶರಲ್ಲಿ ಎಂಟು ಮಂದಿಯನ್ನು ಪಾಕಿಸ್ತಾನ ಸರಕಾರವು ಬುಧವಾರ ಮರುನೇಮಕಗೊಳಿಸಿದೆ.

ಮಿತ್ರ ಪಕ್ಷವು ಪದಚ್ಯುತ ನ್ಯಾಯಾಧೀಶರನ್ನು ಪುನರ್ನೇಮಕಗೊಳಿಸುವ ಭರವಸೆಯನ್ನು ಈಡೇರಿಸುತ್ತಿಲ್ಲ ಎಂಬ ಅಸಮಾಧಾನದೊಂದಿಗೆ ಪಿಎಂಎಲ್-ಎನ್ ಪಕ್ಷದ ಮುಖ್ಯಸ್ಥ ನವಾಜ್ ಶರೀಫ್ ಪಾಕಿಸ್ತಾನ ಸಮ್ಮಿಶ್ರ ಸರಕಾರದಿಂದ ಹೊರನಡೆದ ದಿನಗಳ ನಂತರ, ಸಿಂಧ್ ಹೈಕೋರ್ಟಿನ ಎಂಟು ಪದಚ್ಯುತ ನ್ಯಾಯಾಧೀಶರನ್ನು ಪಿಪಿಪಿ ನೇತೃತ್ವದ ಸರಕಾರವು ಪುನರ್ನೇಮಕಗೊಳಿಸಿದೆ.

ಕರಾಚಿಯ ರಾಜ್ಯಪಾಲರ ಸದನದಲ್ಲಿ ಎಂಟು ಉಚ್ಛಾಟಿತ ನ್ಯಾಯಧೀಶರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ಹೈಕೋರ್ಟಿನ ನೂತನ ಮುಖ್ಯ ನ್ಯಾಯಾಧೀಶರನ್ನಾಗಿ ಅನ್ವರ್ ಝಹೀರ್ ಜಮಾಲಿ ಅವರನ್ನು ನೇಮಕಗೊಳಿಸಲಾಗಿದೆ.

ಅದಾಗ್ಯೂ, ಉಚ್ಚಾಟಿತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಇಫ್ತಿಕಾರ್ ಚೌಧರಿ ಅವರ ಪುನರ್ನೇಮಕದ ಕುರಿತಾಗಿ ಯಾವುದೇ ವಿಚಾರಗಳು ತಿಳಿದುಬಂದಿಲ್ಲ.

ಎಂಟು ನ್ಯಾಯಾಧೀಶರ ಪುನರ್ನೇಮಕವು ಎಲ್ಲಾ ಉಚ್ಛಾಟಿತ ನ್ಯಾಯಧೀಶರ ಮರುನೇಮಕ ಪ್ರಕ್ರಿಯೆ ಆರಂಭದ ಸೂಚನೆಯನ್ನು ನೀಡಿದೆ ಎಂದು ಕಾನೂನು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಸಿಂಧ್ ಹೈಕೋರ್ಟ್‌ನ ನ್ಯಾಯಾಧೀಶರ ಸದಸ್ಯ ಸಂಖ್ಯಾಬಲವನ್ನು 28ರಿಂದ 40ಕ್ಕೇರಿಸಲು ಸರಕಾರವು ಅನುಮೋದನೆ ನೀಡಿದೆ.
ಮತ್ತಷ್ಟು
ಭಾರತದೊಂದಿಗೆ ಗಡೀಪಾರು ಒಪ್ಪಂದಕ್ಕೆ ಬಾಂಗ್ಲಾ ನಕಾರ
ಒಬಾಮಾರೇ ಅಮೆರಿಕ ಅಧ್ಯಕ್ಷರಾಗಬೇಕು: ಕ್ಲಿಂಟನ್
ದುಬೈ: ಬೆಂಕಿ ಅನಾಹುತಕ್ಕೆ 7 ಭಾರತೀಯರ ಆಹುತಿ
ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮೆರಿಕ
ವಿಶ್ವದ ಮೂರನೇ ಒಂದಂಶ ಬಡವರು ಭಾರತದಲ್ಲಿ
ನವಾಜ್ ಷರೀಫ್ ಕ್ಷಮೆ ಯಾಚಿಸಿದ ಜರ್ದಾರಿ