ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಒಬಾಮಾ ಐತಿಹಾಸಿಕ ಅಭ್ಯರ್ಥಿತನ ಅಧಿಕೃತ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಬಾಮಾ ಐತಿಹಾಸಿಕ ಅಭ್ಯರ್ಥಿತನ ಅಧಿಕೃತ ಘೋಷಣೆ
ಅಮೆರಿಕದಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿನ ಡೆಮಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಬರಾಕ್ ಒಬಾಮಾ ಅವರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದ್ದು, ಮೊದಲ ಬಾರಿಗೆ ಕಪ್ಪುಜನಾಂಗದ ಅಮೆರಿಕ ವ್ಯಕ್ತಿಯೊಬ್ಬರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಮೂಲಕ ಒಬಾಮಾ ಅಮೆರಿಕ ರಾಜಕೀಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ.

ಡೆನ್ವರ್‌ನ ಡೆಮಕ್ರೆಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ 47 ವರ್ಷದ ಒಬಾಮಾ ಅವರನ್ನು ಡೆಮಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂಬುದಾಗಿ ಅಧಿಕೃತವಾಗಿ ಘೋಷಿಸಲಾಗಿದೆ. ತಾನು ಒಬಾಮಾಗೆ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಇದೇ ವೇಳೆ ಒಬಾಮಾರ ಮಾಜಿ ಪ್ರತಿಸ್ಪರ್ಧಿ ಹಿಲರಿ ಕ್ಲಿಂಟನ್ ಘೋಷಿಸಿದ್ದಾರೆ.

ಒಗ್ಗಟ್ಟಿನೊಂದಿಗೆ ಮತ್ತು ಗೆಲ್ಲುವ ಗುರಿಯೊಂದಿಗೆ, ದೇಶದ ಹಾಗೂ ಪಕ್ಷದ ಮೇಲಿನ ನಂಬಿಕೆಯೊಂದಿಗೆ, ಬರಾಕ್ ಒಬಾಮಾ ಅವರು ನಮ್ಮ ಅಭ್ಯರ್ಥಿಯಾಗಿದ್ದು, ಒಬಾಮಾ ಅವರೇ ನಮ್ಮ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂದು ಹಿಲರಿ ಹೇಳಿದ್ದಾರೆ.

ಒಬಾಮಾ ಅವರು ಡೆಮಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಸದನ ಪ್ರಾಧಿಕಾರದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಇದೇ ವೇಳೆ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್: 8 ಪದಚ್ಯುತ ನ್ಯಾಯಾಧೀಶರ ಮರುನೇಮಕ
ಭಾರತದೊಂದಿಗೆ ಗಡೀಪಾರು ಒಪ್ಪಂದಕ್ಕೆ ಬಾಂಗ್ಲಾ ನಕಾರ
ಒಬಾಮಾರೇ ಅಮೆರಿಕ ಅಧ್ಯಕ್ಷರಾಗಬೇಕು: ಕ್ಲಿಂಟನ್
ದುಬೈ: ಬೆಂಕಿ ಅನಾಹುತಕ್ಕೆ 7 ಭಾರತೀಯರ ಆಹುತಿ
ಒಪ್ಪಂದದಲ್ಲಿ ಯಾವುದೇ ಬದಲಾವಣೆಯಿಲ್ಲ: ಅಮೆರಿಕ
ವಿಶ್ವದ ಮೂರನೇ ಒಂದಂಶ ಬಡವರು ಭಾರತದಲ್ಲಿ