ಪಾಕಿಸ್ತಾನದ ವಾಯುವ್ಯ ಗಡಿ ಪ್ರಾಂತ್ಯದಲ್ಲಿ ಪೊಲೀಸ್ ವ್ಯಾನನ್ನು ಗುರಿಯಾಗಿಸಿ ನಡೆಸಿದ ಬಾಂಬ್ ಸ್ಫೋಟದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಇತರ ಅನೇಕರು ಗಾಯಗೊಂಡಿದ್ದಾರೆ.
ಕೈದಿಗಳನ್ನು ವಿಚಾರಣೆಗಾಗಿ ಜೈಲಿನಿಂದ ಕೋರ್ಟಿಗೆ ಕರೆದುಕೊಂಡು ಹೋಗುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ವಾಯುವ್ಯ ಗಡಿ ಪ್ರಾಂತ್ಯದ ಬನ್ನು ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಸುದ್ದಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮೃತಪಟ್ಟ ಹೆಚ್ಚಿನವರು ಕೈದಿಗಳಿಗೆ ಬೆಂಗಾವಲಾಗಿದ್ದ ಪೊಲೀಸರೆಂದು ತಿಳಿದುಬಂದಿದೆ. ವ್ಯಾನ್‌ನಲ್ಲಿದ್ದ ಇತರರು ಗಾಯಗೊಂಡಿದ್ದಾರೆ.
ಸ್ಫೋಟಕ ಸಾಧನದೊಂದಿಗೆ ವ್ಯಾನ್ ಮೇಲೆ ಗುರಿಯಿಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಾಖಾಸ್ ಅಹ್ಮದ್ ತಿಳಿಸಿದ್ದು, ಇದೊಂದು ಆತ್ಮಹತ್ಯಾ ದಾಳಿ ಆಗಿರಬಹುದು ಎಂದು ಶಂಕಿಸಲಾಗಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆಯು ಹೊತ್ತುಕೊಂಡಿಲ್ಲ.
|