ಒರಿಸ್ಸಾದಲ್ಲಿ ಕನಿಷ್ಠ 11 ಮಂದಿಯ ಸಾವಿಗೆ ಕಾರಣವಾಗಿರುವ ಹಿಂದು ಮತ್ತು ಕ್ರೈಸ್ತ ಪಂಗಡಗಳ ನಡುವಿನ ಘರ್ಷಣೆಯನ್ನು ಪೋಪ್ ಬೆನೆಡಿಕ್ಟ್ ಅವರು ಖಂಡಿಸಿದ್ದಾರೆ.
ಭಾರತದಲ್ಲಿ ಕ್ರಿಸ್ಚಿಯನ್ ಪಂಗಡಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಕುರಿತ ವರದಿಗಳಿಂದ ಅತ್ಯಂತ ಖೇದಗೊಂಡಿರುವುದಾಗಿ ಬೆನೆಡಿಕ್ಟ್ ಹೇಳಿದ್ದಾರೆ.
ಮಾನವರ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ ಎಂದ ಪೋಪ್, ಭಾರತದ ಒರಿಸ್ಸಾ ರಾಜ್ಯದಲ್ಲಿ ನಡೆಯುತ್ತಿರುವ ಈ ಘರ್ಷಣೆಯು ಅತ್ಯಂತ ವಿಷಾದಕರವಾಗಿದೆ ಎಂದಿದ್ದಾರೆ.
ವಿವಿಧ ಪಂಗಡಗಳ ನಡುವೆ ಶಾಂತಿ ಸಹಬಾಳ್ವೆಯನ್ನು ಪುನರ್ಸ್ಥಾಪಿಸಿ, ಭಾರತೀಯ ಸಮಾಜದಲ್ಲಿ ಸಮರಸವನ್ನು ಉಂಟುಮಾಡಲು ಒಟ್ಟಾಗಿ ಕಾರ್ಯನಿರ್ವಹಿಸುವಂತೆ ಬೆನಿಡಿಕ್ಟ್ ಇದೇ ವೇಳೆ ಕರೆ ನೀಡಿದ್ದಾರೆ.
|