ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದು ಅಮೆರಿಕದ ಪ್ರಥಮ ಪ್ರಾಶಸ್ತ್ಯವಾಗಿದೆ ಎಂದು ಅಮೆರಿಕವು ಗುರುವಾರ ಹೇಳಿದೆ.
ಜಾರ್ಜಿಯಾದಲ್ಲಿನ ಬೆಳವಣಿಗೆಗಳ ಪೂರ್ವಾಭಾವಿಯಾಗಿ ರಶ್ಯಾದೊಂದಿಗಿನ ಪರಮಾಣು ಒಪ್ಪಂದವನ್ನು ಸ್ಥಗಿತಗೊಳಿಸುವ ಕುರಿತಾಗಿ ಕೇಳಲಾದ ಪ್ರಶ್ನೆಗೆ ಅಮೆರಿಕ ವಿದೇಶಾಂಗ ವಿಭಾಗದ ವಕ್ತಾರ ರೋಬರ್ಟ್ ವುಡ್ ಈ ರೀತಿಯಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಸಕ್ತ ಭಾರತದೊಂದಿಗಿನ ಅಣು ಒಪ್ಪಂದ ಕಾರ್ಯಗತಕ್ಕಷ್ಟೇ ಅಮೆರಿಕವು ಆದ್ಯತೆಯನ್ನು ನೀಡುತ್ತಿದೆ ಎಂದು ವುಡ್ ಹೇಳಿದರು.
ಜಾರ್ಜಿಯಾದ ಮೇಲಿನ ರಶ್ಯಾ ದಾಳಿಯ ಕುರಿತಾಗಿ ಪ್ರತಿಕ್ರಿಯೆ ನೀಡಲು ಅಥವಾ ಈ ಕುರಿತಾಗಿ ಅಮೆರಿಕವು ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ತಿಳಿಸಲು ಅಮೆರಿಕವು ಈ ಸಂದರ್ಭದಲ್ಲಿ ಬಯಸುವುದಿಲ್ಲ ಎಂದು ವುಡ್ ಸ್ಪಷ್ಟಪಡಿಸಿದರು.
|