ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಸದೃಢ ಅಮೆರಿಕ ನಿರ್ಮಾಣ: ಒಬಾಮಾ ಭರವಸೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸದೃಢ ಅಮೆರಿಕ ನಿರ್ಮಾಣ: ಒಬಾಮಾ ಭರವಸೆ
ವಾಷಿಂಗ್ಟನ್‌ನ ವಿಫಲವಾಗಿರುವ ನೀತಿಗಳನ್ನು, ಕೃಶವಾಗಿರುವ ರಾಜಕೀಯವನ್ನು ಸರಿಪಡಿಸಿ ಸದೃಢ ಅಮೆರಿಕವನ್ನು ನಿರ್ಮಾಣ ಮಾಡುವುದಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಭರವಸೆ ನೀಡಿದ್ದಾರೆ.

ತನ್ನ ಹರಿತವಾದ ಮಾತುಗಳಿಂದ ಮತ್ತು ವಿವಿಧ ಆಶ್ವಾಸನೆ ನುಡಿಗಳಿಂದ ಡೆನ್ವರ್‌ನ ಡೆಮಕ್ರೆಟಿಕ್ ಸಮಾವೇಶದಲ್ಲಿ ಶುಕ್ರವಾರ ತನ್ನ ಐತಿಹಾಸಿಕ ಭಾಷಣದಲ್ಲಿ ಒಬಾಮಾ ನೆರೆದಿದ್ದ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದರು.

ಬುಷ್ ಅವರಿಂದ ವಿಫಲಗೊಂಡ ಕಾರ್ಯಗಳನ್ನು ಪೂರ್ಣಗೊಳಿಸುವುದಾಗಿ ಹೇಳಿದ ಒಬಾಮಾ, ಇರಾಕಿನಲ್ಲಿ ಅನಗತ್ಯ ಯುದ್ಧವನ್ನು ಸ್ಥಗಿತಗೊಳಿಸಿ ಶಿಕ್ಷಣ, ಆರೋಗ್ಯ ಕಾಳಜಿ ಅಭಿವೃದ್ಧಿಗೊಳಿಸುವತ್ತ ಹಾಗೂ ಆರ್ಥಿಕ ಹಿಂಜರಿತವನ್ನು ನಿಯಂತ್ರಿಸುವತ್ತ ಗಮನಹರಿಸುವುದಾಗಿ ತನ್ನ ಭಾಷಣದಲ್ಲಿ ಅಮೆರಿಕ ಜನತೆಗೆ ಭರವಸೆ ನೀಡಿದರು.

ಅಮೆರಿಕದ ಉನ್ನತ ವೇತನ ಪಡೆಯುವವರ ತೆರಿಗೆ ಪ್ರಮಾಣವನ್ನು ಹೆಚ್ಚಿಸಬೇಕೆಂದು ಕರೆ ನೀಡಿದ ಒಬಾಮಾ, ಇದು ಆರೋಗ್ಯ ಕಾಳಜಿ ಮತ್ತು ಇತರ ದೇಶೀಯ ಕಾರ್ಯಕ್ರಮ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದರು.

ನವೆಂಬರ್ ತಿಂಗಳಲ್ಲಿ ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಕ್ರೆಟಿಕ್ ಪಕ್ಷದ ಅಭ್ಯರ್ಥಿ ಬರಾಕ್ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಮೆಕ್‌ಕೈನ್ ಅವರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.

ಅಭ್ಯರ್ಥಿತನದ ಪ್ರಾಥಮಿಕ ಚುನಾವಣೆಯಲ್ಲಿ ಒಬಾಮಾ ಅವರ ಪ್ರತಿಸ್ಪರ್ಧಿಯಾಗಿದ್ದ ಹಿಲರ್ ಕ್ಲಿಂಟನ್, ಒಬಾಮಾ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಿದ್ದಾರೆ, ಒಂದು ವೇಳೆ, ನವೆಂಬರ್ ತಿಂಗಳ ಅಧ್ಯಕ್ಷೀಯ ಚುನಾವಣೆಯಲ್ಲಿ ಬರಾಕ್ ಒಬಾಮಾ ಅವರು ಗೆಲುವು ಸಾಧಿಸಿದರೆ, ಮೊದಲ ಕಪ್ಪು ಜನಾಂಗದ ಮೊದಲ ವ್ಯಕ್ತಿ ಅಧ್ಯಕ್ಷರಾಗುವ ಮೂಲಕ, ಅಮೆರಿಕ ರಾಜಕೀಯದಲ್ಲಿ ಇತಿಹಾಸ ನಿರ್ಮಿಸಲಿದ್ದಾರೆ.
ಮತ್ತಷ್ಟು
ಜರ್ದಾರಿ ಆಹ್ವಾನಕ್ಕೆ ಶರೀಫ್ ತಿರಸ್ಕಾರ
ಅಣು ಒಪ್ಪಂದಕ್ಕೆ ಪ್ರಥಮ ಆದ್ಯತೆ: ಅಮೆರಿಕ
ಒರಿಸ್ಸಾ ಕೋಮು ಘರ್ಷಣೆ: ಪೋಪ್ ಖಂಡನೆ
ಪಾಕ್: ಪೊಲೀಸ್ ವ್ಯಾನ್ ಮೇಲೆ ಬಾಂಬ್ ದಾಳಿ, 7 ಸಾವು
ಕಾಶ್ಮೀರ ವಿವಾದ: ಪ್ರತಿಕ್ರಿಯೆಗೆ ಅಮೆರಿಕ ನಕಾರ
ಒಬಾಮಾ ಐತಿಹಾಸಿಕ ಅಭ್ಯರ್ಥಿತನ ಅಧಿಕೃತ ಘೋಷಣೆ