ಕೋಸಿ ನದಿಯಲ್ಲುಂಟಾದ ನೆರೆಯಿಂದಾಗಿ ಭಾರತ ಮತ್ತು ನೇಪಾಳದ ಬಲಿಪಶುಗಳಿಗೆ ಪರಿಹಾರ ಕಾರ್ಯವನ್ನು ಒದಗಿಸುತ್ತಿರುವ ಸರಕಾರಿ ಮತ್ತು ಸ್ವತಂತ್ರ ಏಜೆನ್ಸಿಗಳಿಗೆ ಸಹಾಯ ಮಾಡಲು ಸಮಿತಿಯೊಂದನ್ನು ಕಳುಹಿಸಿರುವುದಾಗಿ ಶುಕ್ರವಾರ ವಿಶ್ವಸಂಸ್ಥೆ ಹೇಳಿದೆ.
ಕೋಸಿ ನದಿಯ ಪೂರ್ವ ಅಣೆಕಟ್ಟು ಮುರಿದ ಪರಿಣಾಮವಾಗಿ ಉಂಟಾದ ನೆರೆಯಿಂದಾಗಿ, ನೂರಾರು ಗ್ರಾಮಗಳು ಜಲಾವೃತಗೊಂಡಿದ್ದು, ಸುಮಾರು 200,000 ಮನೆಗಳಿಗೆ ಹಾನಿಯುಂಟಾಗಿದೆ ಎಂದು ವಿಶ್ವಸಂಸ್ಥೆ ಹೇಳಿದ್ದು, ಅಣೆಕಟ್ಟು ದುರಸ್ತಿಯಾಗುವವರೆಗೆ ಸ್ಥಳಾಂತರಗೊಂಡವರು ಮರಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಬಿಹಾರದ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಶ್ವಸಂಸ್ಥೆಯ ಮಕ್ಕಳ ನಿಧಿ ಯುನಿಸೆಫ್ ಸಹಾಯ ಮಾಡುತ್ತಿದ್ದು, ತೀವ್ರ ರೀತಿಯ ನೆರೆಯಿಂದಾಗಿ 1.4 ಮಿಲಿಯ ಜನರು ನಿರಾಶ್ರಿತರಾಗಿದ್ದಾರೆ.
ರಸ್ತೆಗಳು ಹಾನಿಗೊಳಗಾಗಿದ್ದು, ನೀರು ಮತ್ತು ವಿದ್ಯುತ್ ಸಂಪರ್ಕವು ಕಡಿತಗೊಂಡಿದೆ. ರೈಲು ಸಾಗಾಣಿಕೆಯು ಸ್ಥಗಿತಗೊಂಡಿರುವ ಕಾರಣ ಆವಶ್ಯಕ ಉತ್ಪನ್ನಗಳಿಗೆ ಕೊರತೆಯುಂಟಾಗುತ್ತಿದೆ ಎಂದು ಯುನಿಸೆಫ್ ಹೇಳಿದೆ.
|