ಆಸ್ಟ್ರೇಲಿಯಾದಲ್ಲಿ ಭಯೋತ್ಪಾದನೆ ಆರೋಪವನ್ನು ಎದುರಿಸುತ್ತಿದ್ದ ಭಾರತೀಯ ವೈದ್ಯ ಹನೀಫ್ ಅವರ ವಿರುದ್ಧದ ತನಿಖೆಯನ್ನು ಕೈಬಿಟ್ಟಿರುವುದಾಗಿ ಆಸ್ಟ್ರೇಲಿಯಾ ಪೊಲೀಸರು ತಿಳಿಸಿದ್ದು, ಈ ಮೂಲಕ, ಹನೀಫ್ ಪ್ರಕರಣದ ಜಂಜಾಟದಿಂದ ನಿರಾಳವಾದಂತಾಗಿದೆ.
ಕ್ರಿಮಿನಲ್ ಅಪರಾಧದ ಕುರಿತಾಗಿ ಹನೀಫ್ ಅವರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ಇರುವುದರಿಂದ, ಈ ವಿಚಾರಣೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯನ್ ಫೆಡರಲ್ ಪೊಲೀಸ್(ಎಎಫ್‌ಪಿ) ಹೇಳಿಕೆಯಲ್ಲಿ ತಿಳಿಸಿದೆ.
ಕೆಲವು ವಿದೇಶಿ ತನಿಖೆಗಳು ಬಾಕಿ ಉಳಿದಿದ್ದರೂ, ಸಕ್ರಿಯ ತನಿಖೆಗಳನ್ನು ಪೂರ್ಣಗೊಳಿಸಿದೆ ಎಂದು ಎಎಫ್‌ಪಿ ಹೇಳಿದೆ.
ಹನೀಫ್ ಅವರ ಮೇಲೆ ಯಾವುದೇ ವಿಚಾರಣೆಯನ್ನು ನಡೆಸುವ ಆವಶ್ಯಕತೆ ಇಲ್ಲ ಎಂಬುದಾಗಿ ಎಎಫ್‌ಪಿ ಇತ್ತೀಚಿಗೆ ಅಟಾರ್ನಿ ಜನರಲ್ ರೋಬರ್ಟ್ ಮೆಕ್‌ಕ್ಲೆಲಾಂಡ್ ಮತ್ತು ಗೃಹ ಸಚಿವ ಬಾಬ್ ಡೇಬಸ್ ಅವರಿಗೆ ಸೂಚಿಸಿರುವುದಾಗಿ ಹನೀಫ್ ವಕೀಲ ರಾಡ್ ಹಾಡ್‌ಗ್ಸನ್ ತಿಳಿಸಿದ್ದಾರೆ.
|