ನೇಪಾಳದ ಪ್ರಧಾನಮಂತ್ರಿ ಪ್ರಚಂಡ ಅವರು ಚೀನಾಗೆ ಭೇಟಿ ನೀಡಿರುವ ಕುರಿತಾದ ವಿವಾದವು ತಣ್ಣಗಾಗುವ ಮುನ್ನವೇ, ನೇಪಾಳದ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೊಯಿರಾಲಾ ಅವರ ನೇಪಾಳಿ ಪಕ್ಷದ ನಾಯಕರು ಚೀನಾ ಪ್ರವಾಸ ಹೊರಟಿದ್ದಾರೆ.
ನೇಪಾಳಿ ಕಾಂಗ್ರೆಸ್ ಉಪಾಧ್ಯಕ್ಷ ಮತ್ತು ಏಪ್ರಿಲ್‌ನ ಐತಿಹಾಸಿಕ ಚುನಾವಣೆಯಲ್ಲಿ ಆಯ್ಕೆಗೊಂಡ ಮೊದಲ ಪ್ರತಿನಿಧಿ ಪ್ರಕಾಶ್ ಮನ್ ಸಿಂಗ್ ನೇತೃತ್ವದ ಐದು ಸದಸ್ಯರನ್ನೊಳಗೊಂಡ ಎನ್‌ಸಿ ನಿಯೋಗವು ಶನಿವಾರ ಚೀನಾಗೆ ತೆರಳಲಿದೆ.
ಚೀನಾ ಕಮ್ಯುನಿಸ್ಟ್ ಪಕ್ಷದ ವಿದೇಶಾಂಗ ಇಲಾಖೆಯು ನೇಪಾಳದ ಪ್ರಮುಖ ವಿರೋಧ ಪಕ್ಷ ನೇಪಾಳಿ ಕಾಂಗ್ರೆಸ್ ಪಕ್ಷವನ್ನು ಚೀನಾಗೆ ಆಮಂತ್ರಿಸಿದೆ.
ಇಂದು ಚೀನಾಗೆ ತೆರಳಲಿರುವ ನಿಯೋಗವು, ಲಾಸಾ ಮತ್ತು ಶಾಂಘೈಗೆ ಭೇಟಿ ನೀಡಲಿದೆ.
ಟಿಬೆಟ್ ಮತ್ತು ಥೈವಾನ್‌ನನ್ನು ಸೋಶಿಯಲಿಸ್ಟ್ ರಿಪಬ್ಲಿಕ್‌ನ ಭಾಗವಾಗಿ ಪರಿಗಣಿಸಲ್ಪಡುವ ಏಕ ಚೀನಾ ನೀತಿಯ ಒಪ್ಪಂದವನ್ನು ಪುನರಾರಂಭಿಸುವ ದೃಷ್ಟಿಯಿಂದ ಚೀನಾವು ನೇಪಾಳದ ಪ್ರಮುಖ ಪಕ್ಷಗಳ ಓಲೈಕೆಯತ್ತ ಗಮನಹರಿಸಿದೆ.
|