ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾರತ ಚೀನಾ ಹೊರತಾಗಿ ಜಿ8 ದುರ್ಬಲ: ಪುತಿನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾರತ ಚೀನಾ ಹೊರತಾಗಿ ಜಿ8 ದುರ್ಬಲ: ಪುತಿನ್
ಬಲಿಷ್ಠ ಆರ್ಥಿಕತೆಗಳಾಗಿ ಹೊರಹೊಮ್ಮುತ್ತಿರುವ ಭಾರತ ಮತ್ತು ಚೀನಗಳನ್ನು ಒಳಗೊಳ್ಳದ, ಎಂಟು ಉದ್ಯಮ ರಾಷ್ಟ್ರಗಳನ್ನೊಳಗೊಂಡ ಜಿ8 ಸಮೂಹವು ಯಾವುದೇ ತೂಕ ಮತ್ತು ಸಾಮರ್ಥ್ಯವನ್ನು ಹೊಂದುವುದಿಲ್ಲ ಎಂದು ರಶ್ಯಾ ಪ್ರಧಾನಿ ವ್ಲಾಡಮಿರ್ ಪುತಿನ್ ಹೇಳಿದ್ದಾರೆ.

ಪ್ರಮುಖ ನಿರ್ಧಾರಗಳ ವೇಳೆ ಈ ರಾಷ್ಟ್ರಗಳ ಅಭಿಪ್ರಾಯ ಮತ್ತು ಸಲಹೆಗಳ ಹೊರತಾಗಿ ಮತ್ತು ಅವುಗಳ ಪಾಲ್ಗೊಳ್ಳುವಿಕೆ ಇಲ್ಲದೆ, ವಿಶ್ವ ಆರ್ಥಿಕತೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಪುತಿನ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ, ಜಿ8 ಸಾಕಷ್ಟು ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಾರ್ಜಿಯ ವಿವಾದದ ಕುರಿತಾಗಿ ಜಿ8ನಿಂದ ರಶ್ಯಾವನ್ನು ಹೊರಹಾಕುವ ಅಮೆರಿಕದ ಬೆದರಿಕೆಯ ಕುರಿತಾಗಿ ಪ್ರತಿಕ್ರಿಯಿಸಿದ ಪುತಿನ್, ರಶ್ಯಾವು ಬೆದರಿಕೆಗೆ ಅಂಜಿಲ್ಲ. ಪರಿಸ್ಥಿತಿಯ ನೈಜ ವಿಶ್ಲೇಷಣೆಯು ಅತಿ ಮುಖ್ಯವಾಗಿದ್ದು, ಇದರಿಂದ ಮಾತ್ರವೇ ಸಾಮಾನ್ಯ ಸಂಬಂಧ ವೃದ್ಧಿಯಾಗಲು ಸಾಧ್ಯ ಎಂದರು.

ಪ್ರಸಕ್ತ ಜಿ8 ಅಮೆರಿಕ, ರಶ್ಯಾ, ಜಪಾನ್, ಫ್ರಾನ್ಸ್, ಕೆನಡಾ, ಜರ್ಮನಿ, ಬ್ರಿಟನ್ ಮತ್ತು ಇಟಲಿ ರಾಷ್ಟ್ರಗಳನ್ನು ಒಳಗೊಂಡಿದೆ.
ಮತ್ತಷ್ಟು
ಚೀನಾಗೆ ನೇಪಾಳಿ ಕಾಂಗ್ರೆಸ್ ನಿಯೋಗ
ಮೋದಿಗೆ ವೀಸಾ ನೀಡಲು ಅಮೆರಿಕ ನಕಾರ
ಹನೀಫ್ ವಿಚಾರಣೆ ಕೈಬಿಟ್ಟ ಆಸ್ಟ್ರೇಲಿಯನ್ ಪೊಲೀಸರು
ಬಿಹಾರ ನೆರೆ: ವಿಶ್ವಸಂಸ್ಥೆಯಿಂದ ನೆರವು
ಸದೃಢ ಅಮೆರಿಕ ನಿರ್ಮಾಣ: ಒಬಾಮಾ ಭರವಸೆ
ಜರ್ದಾರಿ ಆಹ್ವಾನಕ್ಕೆ ಶರೀಫ್ ತಿರಸ್ಕಾರ