ಪಾಕಿಸ್ತಾನದಲ್ಲಿ ಸೆಪ್ಟೆಂಬರ್ ಆರರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿಪಿಪಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಮೂರು ಮಂದಿ ಕಣದಲ್ಲಿದ್ದಾರೆ.
ಪಿಪಿಪಿ ಮುಖ್ಯಸ್ಥ ಜರ್ದಾರಿ, ಪಿಎಂಎಲ್-ಎನ್ ಅಭ್ಯರ್ಥಿ ಸೈಯೀದ್ ಅಜ್ ಝಮಾನ್ ಸಿದ್ಧಿಕ್ ಮತ್ತು ಪಿಎಂಎಲ್-ಕ್ಯೂ ಅಭ್ಯರ್ಥಿ ಮುಷಾಹಿದ್ ಹುಸೈನ್ ಸೈಯದ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಈ ಮೊದಲು, ಅಧ್ಯಕ್ಷೀಯ ಚುನಾವಣೆಯ ಪಿಎಂಎಲ್-ಎನ್ ಪಕ್ಷದ ಅಭ್ಯರ್ಥಿಯನ್ನು ಹಿಂದಕ್ಕೆ ತೆಗೆಯಬೇಕೆಂಬ ಪಿಪಿಪಿ ಮುಖ್ಯಸ್ಥ ಜರ್ದಾರಿ ಅವರ ಮನವಿಯನ್ನು ಪಿಎಂಎಲ್-ಎನ್ ಮುಖ್ಯಸ್ಥ ನವಾಜ್ ಶರೀಫ್ ತಿರಸ್ಕರಿಸಿದ್ದರು.
ಪಿಪಿಪಿ ಪಕ್ಷದ ಪರವಾಗಿ ಜರ್ದಾರಿ ಅವರ ಸಹೋದರಿ ಫಾರ್ಯಲ್ ತಲ್ಪೂರ್ ,ಈ ಮೊದಲು ಸ್ಪರ್ಧೆಯಲ್ಲಿದ್ದು, ಆದರೆ, ಅಧ್ಯಕ್ಷೀಯ ಚುನಾವಣೆಗೆ ಜರ್ದಾರಿ ಅವರು ಸ್ಪರ್ಧಿಸುವ ನಿರ್ಧಾರವನ್ನು ಪಕ್ಷವು ಕೈಗೊಂಡ ಹಿನ್ನೆಲೆಯಲ್ಲಿ ನಾಮಪತ್ರವನ್ನು ಅವರು ಹಿಂತೆಗೆದುಕೊಂಡಿದ್ದಾರೆ.
|