ವಿಶ್ವಸಂಸ್ಥೆ ಪ್ರಧಾನ ಅಸೆಂಬ್ಲಿಯಲ್ಲಿ ಭಾಗವಹಿಸಲು ನ್ಯೂಯಾರ್ಕ್‌ಗೆ ತೆರಳುವ ಮುನ್ನ, ನೇಪಾಳದ ನೂತನ ಪ್ರಧಾನಿ ಪ್ರಚಂಡ ಅವರು ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ನೇಪಾಳದ ವಿದೇಶಾಂಗ ಸಚಿವ ಉಪೇಂದ್ರ ಯಾದವ್ ತಿಳಿಸಿದ್ದಾರೆ.
ಭಾರತ ಭೇಟಿ ನೀಡಲು ನೇಪಾಳ ಪ್ರಧಾನಿ ಪ್ರಚಂಡ ಅತ್ಯಂತ ಉತ್ಸುಕಗೊಂಡಿದ್ದು, ಇದಕ್ಕಾಗಿ ದಿನ ನಿಗದಿಪಡಿಸಲು ಭಾರತೀಯ ಸರಕಾರಕ್ಕೆ ಮನವಿ ಮಾಡುತ್ತೇವೆ. ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ನಡೆಯಲಿರುವ ವಿಶ್ವಂಸ್ಥೆ ಪ್ರಧಾನ ಅಸೆಂಬ್ಲಿಯ ಮುನ್ನವೇ ಭಾರತಕ್ಕೆ ಭೇಟಿ ನೀಡಲು ಪ್ರಚಂಡ ಅವರು ಬಯಸುತ್ತಾರೆ ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಚಂಡ ಅವರು ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 20ರೊಳಗೆ ಭಾರತ ಭೇಟಿ ನೀಡುವ ಸಂಭವವಿದೆ ಎಂದು ಅಧಿಕೃತ ಮೂಲಗಳಿ ತಿಳಿಸಿವೆ.
ಎರಡು ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ವಿಶ್ವದ ಯಾವುದೇ ಅಧಿಕಾರಗಳು ಅಸಮಧಾನಗೊಳ್ಳಲು ಸಾಧ್ಯವಾಗದ ಕಾರಣ, ಪ್ರಚಂಡ ಅವರ ಇತ್ತೀಚಿನ ಚೀನಾ ಭೇಟಿಯ ಬಗ್ಗೆ ಭಾರತವು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಯಾದವ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
|