ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ತುರ್ತುಪರಿಸ್ಥಿತಿ ಹೇರಲಾರೆ: ಥಾಯ್ ಪ್ರಧಾನಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತುರ್ತುಪರಿಸ್ಥಿತಿ ಹೇರಲಾರೆ: ಥಾಯ್ ಪ್ರಧಾನಿ
ಮುಂಬರುವ ಸಂಸತ್ ಅಧಿವೇಶನಕ್ಕೆ ಮೊದಲು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರುವುದಿಲ್ಲ ಎಂದು ಥಾಯ್ಲೆಂಡ್ ಪ್ರಧಾನಿ ಸಮಕ್ ಸುಂದರವೆಜ್ ಅವರು ಭರವಸೆ ನೀಡಿದ್ದಾರೆ.

ಈ ನಿರ್ಧಾರವು ಪ್ರತಿಭಟನಾಕಾರರು ರಾಜಧಾನಿಯಲ್ಲಿ ತಮ್ಮ ಕಚೇರಿಗಳಿಗೆ ಹಾಕಿರುವ ದಿಗ್ಭಂಧನವನ್ನು ಕೊನೆಯಾಗಿಸುತ್ತದೆ ಎಂಬ ಆಶಾಭಾವವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಹೀಗಾಗಿ ತಮ್ಮ ರಾಜೀನಾಮೆಯನ್ನು ಒತ್ತಾಯಿಸಿ ಕಳೆದ ಮಂಗಳವಾರ ಆರಂಭಗೊಂಡಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಇನ್ನೂ ಅವರು ಶಾಂತಿ ಹಾದಿಯಲ್ಲೇ ನಂಬಿಕೆ ಇಟ್ಟಿರುವುದು ಸ್ಪಷ್ಟವಾಗಿದೆ.

ಆದರೆ ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸಿದ್ದರೂ ಕೂಡ, ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟಿವಿ ಮೂಲಕ ಮಾಡಿರುವ ಭಾಷಣದಲ್ಲಿ ದೇಶದಲ್ಲಿ ಇದೇ ಪರಿಸ್ಥಿತಿ ಹೆಚ್ಚು ಕಾಲ ಮುಂದುವರಿಯಲು ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತುರ್ತು ಪರಿಸ್ಥಿತಿ ಹೇರಿ ಕೆಟ್ಟ ವಾತಾವರಣ ಸೃಷ್ಟಿಸುವುದು ನಮಗೆ ಬೇಕಾಗಿಲ್ಲ. ಆದರೆ ಸರ್ಕಾರವನ್ನು ಕಿತ್ತೆಸೆಯುವುದು ವಿರೋಧಿಗಳಾದ ಪೀಪಲ್ಸ್ ಅಲಯನ್ಸ್ ಫಾರ್ ಡೆಮಾಕ್ರಸಿ ಉದ್ದೇಶವಾಗಿದೆ ಎಂದು ಆಪಾದಿಸಿದರು.

ಸರ್ಕಾರಿ ಕಚೇರಿಗಳು ಮತ್ತು ವಿಮಾನ ನಿಲ್ದಾಣಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಹಾಗದರೆ ಇದು ಪ್ರಜಾಪ್ರಭುತ್ವ ನಾಶ ಮಾಡಲು ಮಾಡಿಕೊಂಡಿರುವ ಮೈತ್ರಿಕೂಟವೇ ಎಂದು ಸುಂದರವೆಜ್ ಖಾರವಾಗಿ ಪ್ರಶ್ನಿಸಿದ್ದಾರೆ.
ಮತ್ತಷ್ಟು
ಪಕ್ಷಗಳ ನಡುವೆ ಘರ್ಷಣೆ:ನೇಪಾಳದಲ್ಲಿ ಕರ್ಫ್ಯೂ
ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರಚಂಡ ಭೇಟಿ
ಪಾಕ್ ಅಧ್ಯಕ್ಷೀಯ ಚುನಾವಣೆ; ಕಣದಲ್ಲಿ 3 ಮಂದಿ
ಒರಿಸ್ಸಾ ಹಿಂಸಾಚಾರ: ನ್ಯೂಯಾರ್ಕ್‌ನಲ್ಲಿ ಪ್ರಾರ್ಥನಾ ಸಭೆ
ಬಾರತ ಚೀನಾ ಹೊರತಾಗಿ ಜಿ8 ದುರ್ಬಲ: ಪುತಿನ್
ಚೀನಾಗೆ ನೇಪಾಳಿ ಕಾಂಗ್ರೆಸ್ ನಿಯೋಗ