ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಅಮ್ಟೆ ದಂಪತಿ'ಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಅಮ್ಟೆ ದಂಪತಿ'ಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ
ಖ್ಯಾತ ಪರಿಸರವಾದಿ ದಿ.ಬಾಬಾ ಅಮ್ಟೆ ಅವರ ಪುತ್ರ ಪ್ರಕಾಶ್ ಅಮ್ಟೆ ಹಾಗೂ ಮಂದಾಕಿನಿ ಅಮ್ಟೆ ದಂಪತಿಗಳಿಗೆ 2008ರ ಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಭಾನುವಾರ ಇಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದರು.

ಈ ಸಮಾರಂಭದಲ್ಲಿ ಥಾಯ್‌ಲ್ಯಾಂಡ್‌ನ ಥೆರಾಡ್‌‌ಚಯ್ ಜಿವಾಕೆಟ್, ಫಿಲಿಫೈನ್ಸ್‌ನ ಜೈಮೆ ಅಲಿಪ್, ಜಪಾನ್‌ನ ಅಕಿಯೋ ಇಶಿ, ಇಂಡೋನೇಶ್ಯಾದ ಅಹ್ಮದ್ ಸೈಫಿ ಮಾರಫಿ, ಶ್ರೀಲಂಕಾದ ಆನಂದಾ ಗಾಲಾಪಟ್ಟಿ ಸೇರಿದಂತೆ ಡಾ.ಅಮ್ಟೆ ದಂಪತಿಗಳಿಗೆ 2008ರ ಮ್ಯಾಗ್ಸೆಸೆ ಪದಕ ಮತ್ತು ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು.

ಮಹಾರಾಷ್ಟ್ರದಲ್ಲಿನ ಬುಡಕಟ್ಟು ಜನಾಂಗಗಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಸೂಕ್ತ ಶಿಕ್ಷಣ ನೀಡುವುದರಲ್ಲಿ ತೊಡಗಿಸಿಕೊಂಡಿರುವ ಖ್ಯಾತ ಸಮಾಜ ಸೇವಾಕರ್ತರಾದ ಬಾಬಾ ಅಮ್ಟೆ ಅವರ ಪುತ್ರ ಡಾ. ಪ್ರಕಾಶ್ ಅಮ್ಟೆ ಮತ್ತು ಸೊಸೆ ಡಾ. ಮಂದಾಕಿನಿ ಅಮ್ಟೆ ದಂಪತಿಗಳಿಗೆ 2008ನೇ ಸಾಲಿನ ಪ್ರತಿಷ್ಟಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಫೈನ್ಸ್ ಕಳೆದ ತಿಂಗಳು ಘೋಷಿಸಿತ್ತು.

ಮಹಾರಾಷ್ಟ್ರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾಗಿರುವ ಗಡ್‌‌ಚಿರೋಳಿ ವ್ಯಾಪ್ತಿಯಲ್ಲಿ ಬರುವ ಹೆಮಲ್ಕಸಾ ಎಂಬ ಬುಡಕಟ್ಟು ಗ್ರಾಮದಲ್ಲಿ ದಂಪತಿಗಳಿರ್ವರೂ ಶಾಲೆ ಮತ್ತು ಆಸ್ಪತ್ರೆಯನ್ನು ನಡೆಸುತ್ತಿದ್ದು ಅಲ್ಲಿ ನೆಲೆಸಿರುವ ಮಾದಿಯಾ ಗೊಂಡ ಬುಡಕಟ್ಟು ಜನಾಂಗದವರನ್ನು ಶಿಕ್ಷಣ ಮತ್ತು ವೈದ್ಯಕೀಯ ಚಿಕಿತ್ಸೆಯ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ.

ಇದೇ ವರ್ಷ ಫೆಬ್ರವರಿಯಲ್ಲಿ ದಿವಂಗತರಾದ ಪ್ರಕಾಶ ಅವರ ತಂದೆ ಬಾಬಾ ಅಮ್ಟೆ ಅವರು 1985ರಲ್ಲಿ ಸಮಾಜ ಸೇವೆಗೆ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದಿದ್ದರು. ಒಟ್ಟಿ ನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬವೊಂದು ಒಟ್ಟು ಮೂರು ಪ್ರತಿಷ್ಟಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರವಾಗಿದೆ.
ಮತ್ತಷ್ಟು
ತುರ್ತುಪರಿಸ್ಥಿತಿ ಹೇರಲಾರೆ: ಥಾಯ್ ಪ್ರಧಾನಿ
ಪಕ್ಷಗಳ ನಡುವೆ ಘರ್ಷಣೆ:ನೇಪಾಳದಲ್ಲಿ ಕರ್ಫ್ಯೂ
ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಪ್ರಚಂಡ ಭೇಟಿ
ಪಾಕ್ ಅಧ್ಯಕ್ಷೀಯ ಚುನಾವಣೆ; ಕಣದಲ್ಲಿ 3 ಮಂದಿ
ಒರಿಸ್ಸಾ ಹಿಂಸಾಚಾರ: ನ್ಯೂಯಾರ್ಕ್‌ನಲ್ಲಿ ಪ್ರಾರ್ಥನಾ ಸಭೆ
ಬಾರತ ಚೀನಾ ಹೊರತಾಗಿ ಜಿ8 ದುರ್ಬಲ: ಪುತಿನ್