ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದ ಹಾಗೂ ಕರಡು ತಿದ್ದುಪಡಿಗೆ ಸಂಬಂಧಿಸಿದಂತೆ ಅಮೆರಿಕದ ಹಿರಿಯ ರಾಯಭಾರಿ ರಿಚರ್ಡ್ ಬೌಚರ್ ಅವರು ಸೋಮವಾರ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ಆನಂದ್ ಶರ್ಮಾ ಅವರೊಂದಿಗೆ ಚರ್ಚೆ ನಡೆಸಿದ್ದು, ಇದೀಗ ಎನ್‌ಎಸ್‌ಜಿ ಗ್ರೂಪ್ ಅಸಮಾಧಾನ ಹೊಂದಿರುವ ನೆಲೆಯಲ್ಲಿ ಅಣು ಒಪ್ಪಂದಕ್ಕೆ ಅಂಕಿತ ಬೀಳುವ ಬಗ್ಗೆ ಅನುಮಾನ ಮೂಡಿಸಿದೆ.
ಈಗಾಗಲೇ ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದದ ಕುರಿತು ಅಣು ಇಂಧನ ಸರಬರಾಜು ದೇಶಗಳ (ಎನ್‌ಎಸ್‌ಜಿ) ಜೊತೆಗೆ ಮುಂದುವರಿಯುವಂತೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೆ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಕರಡು ತಿದ್ದುಪಡಿಗೆ ಕೆಲವು ದೇಶಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಅಣುಬಂಧದ ನಿಯಮದಡಿಯ ಕರಡು ತಿದ್ದುಪಡಿಗೆ ಆಗೋಸ್ಟ್ 21-22ರಂದು ನಡೆದ ಎನ್‌ಎಸ್‌ಜಿ ಗ್ರೂಫ್ ಸಭೆಯಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರಿಯಾ ವಿರೋಧ ವ್ಯಕ್ತ ಪಡಿಸಿದ್ದವು.
ಆ ನಿಟ್ಟಿನಲ್ಲಿ ಸೆಪ್ಟೆಂಬರ್ 4ಮತ್ತು 5ರಂದು ಮತ್ತೆ ನಡೆಯಲಿರುವ ಎನ್‌ಎಸ್‌ಜಿ ಗ್ರೂಪ್ ಸಭೆಯಲ್ಲಿ ಅಮೆರಿಕ-ಭಾರತ ಅಣು ಒಪ್ಪಂದದ ಕರಡು ತಿದ್ದುಪಡಿಯನ್ನು ತಿರಸ್ಕರಿಸುವ ಮೂಲಕ, ಒಪ್ಪಂದಕ್ಕೆ ಅಂಕಿತ ಹಾಕುವ ಬಗ್ಗೆ ಅನುಮಾನ ಮೂಡಿಸಿದೆ.
ಚೀನಾ ವಿರೋಧ: ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಚೀನಾ ಅಪಸ್ವರ ಎತ್ತಿದ್ದು, ಇದರಿಂದ ಅಣ್ವಸ್ತ್ರ ತಡೆ ಪ್ರಸರಣಕ್ಕೆ ಧಕ್ಕೆಯಾಗಲಿದೆ ಎಂದು ಆರೋಪಿಸಿದೆ.
|