ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ಯಾಂಕಾಕ್: ತುರ್ತು ಪರಿಸ್ಥಿತಿ ಘೋಷಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕಾಕ್: ತುರ್ತು ಪರಿಸ್ಥಿತಿ ಘೋಷಣೆ
ಸರ್ಕಾರದ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ಗುಂಪುಗಳ ನಡುವೆ ಸೋಮವಾರ ತಡರಾತ್ರಿ ಘರ್ಷಣೆ ಏರ್ಪಟ್ಟ ಹಿನ್ನೆಲೆಯಲ್ಲಿ ಥಾಯ್ ಪ್ರಧಾನಿ ಸಮಕ್ ಸುಂದರವೆಜ್ ಅವರು ಮಂಗಳವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು,ಆಡಳಿತವನ್ನು ಆರ್ಮಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ.

ದೇಶದಲ್ಲಿ ಉಲ್ಭಣಗೊಂಡ ರಾಜಕೀಯ ಬಿಕ್ಕಟ್ಟಿನ ಕಾರಣದಿಂದಾಗಿ ತುರ್ತು ಪರಿಸ್ಥಿತಿ ಹೇರಿರುವುದಾಗಿ ಪ್ರಧಾನಿ ಸಮಕ್ ಅವರು ದೂರದರ್ಶನ ಮತ್ತು ರೇಡಿಯೋ ಮೂಲಕ ಘೋಷಿಸಿದ್ದಾರೆ.

ರಾಜಧಾನಿಯಾದ್ಯಂತ ಸಾರ್ವಜನಿಕರು ಗುಂಪುಗೂಡಿದ್ದು,ಮಾಧ್ಯಮ ವರದಿಗಳ ಮೇಲೆ ನಿಷೇಧ ಹೇರಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಆದರೆ ಮುಂಬರುವ ಸಂಸತ್ ಅಧಿವೇಶನಕ್ಕೆ ಮೊದಲು ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರುವುದಿಲ್ಲ ಎಂದು ಥಾಯ್ಲೆಂಡ್ ಪ್ರಧಾನಿ ಸಮಕ್ ಸುಂದರವೆಜ್ ಅವರು ಸೋಮವಾರವಷ್ಟೇ ಭರವಸೆ ನೀಡಿದ್ದರು.

ಈ ನಿರ್ಧಾರವು ಪ್ರತಿಭಟನಾಕಾರರು ರಾಜಧಾನಿಯಲ್ಲಿ ತಮ್ಮ ಕಚೇರಿಗಳಿಗೆ ಹಾಕಿರುವ ದಿಗ್ಭಂಧನವನ್ನು ಕೊನೆಯಾಗಿಸುತ್ತದೆ ಎಂಬ ಆಶಾಭಾವವನ್ನೂ ಅವರು ವ್ಯಕ್ತಪಡಿಸಿದ್ದರು.

ಅಲ್ಲದೇ ತಮ್ಮ ರಾಜೀನಾಮೆಯನ್ನು ಒತ್ತಾಯಿಸಿ ಕಳೆದ ಮಂಗಳವಾರ ಆರಂಭಗೊಂಡಿರುವ ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಇನ್ನೂ ಅವರು ಶಾಂತಿ ಹಾದಿಯಲ್ಲೇ ನಂಬಿಕೆ ಇಟ್ಟಿರುವುದಾಗಿ ಹೇಳಿದ್ದರು.

ಆದರೆ ಪ್ರತಿಪಕ್ಷಗಳು ರಾಜೀನಾಮೆಗೆ ಆಗ್ರಹಿಸಿದ್ದರೂ ಕೂಡ,ರಾಜೀನಾಮೆಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಟಿವಿ ಮೂಲಕ ಮಾಡಿರುವ ಭಾಷಣದಲ್ಲಿ ದೇಶದಲ್ಲಿ ಇದೇ ಪರಿಸ್ಥಿತಿ ಹೆಚ್ಚು ಕಾಲ ಮುಂದುವರಿಯಲು ಅವಕಾಶ ಕೊಡಲು ಸಾಧ್ಯವಿಲ್ಲ ಎನ್ನುವ ಮೂಲಕ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದರು.

ತುರ್ತು ಪರಿಸ್ಥಿತಿ ಕೆಲವು ದಿನಗಳ ಕಾಲ ಮಾತ್ರ ಮುಂದುವರಿಯಲಿದೆ ಎಂದು ಪ್ರಧಾನಿ ಸಮಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಮತ್ತಷ್ಟು
ಜಪಾನ್ ಪ್ರಧಾನಿ ರಾಜೀನಾಮೆ
'ಅಣುಬಂಧ'ಕ್ಕೆ ಎನ್‌ಎಸ್‌ಜಿ ಅಪಸ್ವರ ?
ಚೀನಾ ಭಾರೀ ಭೂಕಂಪಕ್ಕೆ 27 ಬಲಿ
ಅಮೆರಿಕ ಕರಾವಳಿಗೆ ಕಾಲಿಟ್ಟ 'ಗುಸ್ತವ್ ಚಂಡಮಾರುತ'
'ಅಮ್ಟೆ ದಂಪತಿ'ಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ
ತುರ್ತುಪರಿಸ್ಥಿತಿ ಹೇರಲಾರೆ: ಥಾಯ್ ಪ್ರಧಾನಿ