ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಹೈಟಿ - ಗುಸ್ತಾವ್ ದಾಳಿಗೆ 77 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೈಟಿ - ಗುಸ್ತಾವ್ ದಾಳಿಗೆ 77 ಬಲಿ
ಅಮೆರಿಕದ ಕರಾವಳಿಯ ಹೈಟಿಯಲ್ಲಿ ಹರಿಕೇನ್ ತದ್ರೂಪಿ ಚಂಡಮಾರುತ 'ಗುಸ್ತಾವ್' ದಾಳಿಗೆ 77 ಮಂದಿ ಬಲಿಯಾಗಿದ್ದು, ಎಂಟು ಮಂದಿ ನಾಪತ್ತೆಯಾಗಿರುವುದಾಗಿ ಹವಾಮಾನ ಇಲಾಖೆಯ ಅಧಿಕಾರಿಗಳು ಮಂಗಳವಾರ ಅಧಿಕೃತವಾಗಿ ತಿಳಿಸಿದ್ದಾರೆ.

ಕಳೆದ ವಾರ ಅಮೆರಿಕ ಕರಾವಳಿ ಪ್ರದೇಶದತ್ತ ಭಾರೀ ಗಾಳಿ-ಮಳೆಯೊಂದಿಗೆ ಮುನ್ನುಗ್ಗಿದ್ದ ಚಂಡಮಾರುತ ಗುಸ್ತಾವ್, ದ್ವೀಪ ಪ್ರದೇಶವಾದ ಹಿಸ್‌‌ಪಾನಿಯೋಲಾ ಮತ್ತು ಹೈಟಿ ಪ್ರದೇಶದಲ್ಲಿ ಭಾರೀ ಹಾನಿಯನ್ನುಂಟು ಮಾಡಿದ್ದು, ಸೋಮವಾರದಂದು 36 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.

ಕಳೆದ ವರ್ಷ ಬೀಸಿದ ಹರಿಕೇನ್ ಚಂಡಮಾರುತ ಉಂಟು ಮಾಡಿದಷ್ಟೇ ಭೀತಿಯನ್ನು ಈ ಬಾರಿಯ ಗುಸ್ತಾವ್ ಕೂಡ ಜನರನ್ನು ಅತಂತ್ರ ಸ್ಥಿತಿಗೆ ನೂಕಿರುವುದಾಗಿ ತಿಳಿಸಿದ್ದಾರೆ.

ಗುಸ್ತಾವ್ ದಾಳಿಯಿಂದಾಗಿ ಹೈಟಿ ಪ್ರದೇಶದ 15ಸಾವಿರ ನಿವಾಸಿಗಳಿಗೆ ತೊಂದರೆ ಉಂಟಾಗಿದ್ದು,ಸುಮಾರು 3ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿರುವುದಾಗಿ ಅಧಿಕರಿಗಳು ಹೇಳಿದ್ದಾರೆ.

ಆ ನಿಟ್ಟಿನಲ್ಲಿ ಮುನ್ನೆಚ್ಚರಿಕೆಯ ಅಂಗವಾಗಿ 'ಕಿಲ್ಲರ್ ಚಂಡಮಾರುತ'ದ ಅಪಾಯದಿಂದ ಪಾರಾಗಲು ಲೂಸಿಯಾನದ ಸುಮಾರು ಎರಡು ಮಿಲಿಯನ್ ಜನರು ಭಾನುವಾರ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.

ಈ ಪ್ರಮಾಣದಲ್ಲಿ ಜನರನ್ನು ಸುರಕ್ಷಿತ ಸ್ಥಳಾಂತರಿಸಿರುವುದು ಅಮೆರಿಕದ ಇತಿಹಾಸದಲ್ಲಿಯೇ ದಾಖಲೆ ಪ್ರಮಾಣದ್ದಾಗಿತ್ತು. ಅಲ್ಲದೇ ಎಲ್ಲಾ ತೈಲೋತ್ಪನ್ನ ಕಾರ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಭಾನುವಾರ ತಡರಾತ್ರಿಯಿಂದ ಆರಂಭಗೊಂಡಿರುವ ಬಿರುಗಾಳಿ ಮತ್ತು ಮಳೆಯಿಂದಾಗಿ ಪೂರ್ವಭಾಗದ ನ್ಯೂ ಒರ್ಲೆನ್ಸ್‌‌ನಲ್ಲಿ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗಿತ್ತು.
ಮತ್ತಷ್ಟು
ಜಪಾನ್: ತುರ್ತು ಪರಿಸ್ಥಿತಿ ಘೋಷಣೆ
ಜಪಾನ್ ಪ್ರಧಾನಿ ರಾಜೀನಾಮೆ
'ಅಣುಬಂಧ'ಕ್ಕೆ ಎನ್‌ಎಸ್‌ಜಿ ಅಪಸ್ವರ ?
ಚೀನಾ ಭಾರೀ ಭೂಕಂಪಕ್ಕೆ 27 ಬಲಿ
ಅಮೆರಿಕ ಕರಾವಳಿಗೆ ಕಾಲಿಟ್ಟ 'ಗುಸ್ತವ್ ಚಂಡಮಾರುತ'
'ಅಮ್ಟೆ ದಂಪತಿ'ಗಳಿಗೆ ಮ್ಯಾಗ್ಸೆಸೆ ಪ್ರಶಸ್ತಿ ಪ್ರಧಾನ