ಸಾರ್ವಜನಿಕ ವಿಷಯಗಳನ್ನು ನಿರ್ಲಕ್ಷಿಸುತ್ತಿರುವ ಆಡಳಿತರೂಢ ಪಿಪಿಪಿ ಸರಕಾರದ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಅಧ್ಯಕ್ಷ ನವಾಜ್ ಷರೀಫ್ ಅವರು, ದೇಶದಲ್ಲಿನ ಪ್ರಸಕ್ತ ಸರ್ಕಾರ ಶೀಘ್ರವೇ ಪತನಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅವರು ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡುತ್ತ,ಸರ್ಕಾರವನ್ನು ಉರುಳಿಸಬೇಕೆಂಬ ಇಚ್ಚೆ ತನಗಿಲ್ಲ ಎಂದಿರುವ ಅವರು,ಆದರೆ ಸದ್ಯದ ಸ್ಥಿತಿಯಲ್ಲಿ ಮುಂ ದುವರಿಯುತ್ತಿರುವ ಸರ್ಕಾರ ಧ್ಯೇಯ ಧೋರಣೆ ಆತಂಕ ಹುಟ್ಟಿಸಿದ್ದು, ಈ ಸರ್ಕಾರ ಜನರ ಹಾಗೂ ರಾಜಕೀಯ ಮುಖಂಡರ ವಿಶ್ವಾಸವನ್ನು ಕಳೆದುಕೊಂಡಿದೆ ಎಂದರು.
ಪದಚ್ಯುತ ನ್ಯಾಯಾಧೀಶರ ಮರು ನೇಮಕ ಒಪ್ಪಂದವನ್ನು ಈಡೇರಿಸುವಲ್ಲಿ ಮೀನ-ಮೇಷ ಎಣಿಸಿದ ಪಿಪಿಪಿ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ನಿಲುವಿನ ನಂತರ ಆಡ ಳಿತ ಮೈತ್ರಿಕೂಟ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಷರೀಫ್ ಹಿಂದಕ್ಕೆ ಪಡೆದಿದ್ದರು.
ಏತನ್ಮಧ್ಯೆ ಪಾಕಿಸ್ತಾನದಲ್ಲಿ ಮತ್ತೊಮ್ಮೆ ಮಿಲಿಟರಿ ಆಡಳಿತ ಬರುವ ಸಾಧ್ಯತೆ ಇದೆಯೇ ಎಂಬ ಸುದ್ದಿವಾಹಿನಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಕ್ ರಾಜಕೀಯ ವಿಷಯದಲ್ಲಿ ಮಿಲಿಟರಿ ಮೂಗು ತೂರಿಸುವುದನ್ನು ನಾನು ಇಷ್ಟಪಡಲಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಪಿಎಂಎಲ್‌ಎನ್‌ನ ಅಭ್ಯರ್ಥಿಯಾಗಿರುವ ನಿವೃತ್ತ ನ್ಯಾಯಮೂರ್ತಿ ಸಾಯಿದ್ ಉಜ್ಜಾಮನ್ ಸಿದ್ದಿಕಿ ಅವರನ್ನು ಕಣದಿಂದ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಷರೀಫ್ ಈ ಸಂದರ್ಭದಲ್ಲಿ ತಿಳಿಸಿದರು.
|