ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣು ಒಪ್ಪಂದಕ್ಕೆ ಚೀನಾ ತಕರಾರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ಒಪ್ಪಂದಕ್ಕೆ ಚೀನಾ ತಕರಾರು
ಭಾರತ ಮತ್ತು ಅಮೆರಿಕ ನಾಗರಿಕ ಪರಮಾಣು ಒಪ್ಪಂದದ ಬಗ್ಗೆ ಚೀನಾ ಅಪಸ್ವರ ಎತ್ತಿರುವುದು ಭಾರತಕ್ಕೆ ಇರಿಸುಮುರುಸು ಉಂಟು ಮಾಡಿದೆ.

ಈ ಒಪ್ಪಂದದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಧಕ್ಕೆ ಆಗುತ್ತದೆ ಎಂದು ಚೀನಾ ಸರ್ಕಾರದ ಮುಖವಾಣಿಯಾದ ಪೀಪಲ್ಸ್ ಡೈಲಿಯಲ್ಲಿ ವರದಿ ಮಾಡಲಾಗಿದೆ.

ಅಣು ಇಂಧನ ಪೂರೈಕೆ ರಾಷ್ಟ್ರಗಳ ಸಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ಸುರಕ್ಷತಾ ಒಪ್ಪಂದಕ್ಕೆ ಸಹಿ ಮಾಡಬೇಕಿದೆ.ಆದರೆ ಸೆಪ್ಟೆಂಬರ್ ಕೊನೇ ವೇಳೆಗೆ ಈ ಒಪ್ಪಂದಕ್ಕೆ ಸಹಿ ಬೀಳದಿದ್ದರೆ ಬುಷ್ ಆಡಳಿತ ಕೊನೆಗೊಳ್ಳುವ ಮೊದಲು ಭಾರತ - ಅಮೆರಕ ಅಣು ಒಪ್ಪಂದ ಸಾಧ್ಯವಾಗಲಾರದು.

ಇದೀಗ ಚೀನಾ ಜೊತೆಗೆ ಜಪಾನ್ ಕೂಡ ಅಪಸ್ವರ ತೆಗೆದಿದೆ. ಮತ್ತೊಮ್ಮೆ ಭಾರತ ಅಣು ಸ್ಫೋಟ ನಡೆಸಿದರೆ,ತಾನೇ ತಾನಾಗಿ ಇಂಧನ ಪೂರೈಕೆ ಕರಾರು ರದ್ದಾಗುತ್ತದೆ ಎಂಬ ಅಂಶವನ್ನು ಕರಾರಿನಲ್ಲಿ ಸೇರಿಸಬೇಕು ಎಂದು ಜಪಾನ್ ಒತ್ತಾಯಿಸಿದೆ. ಆದರೆ ಈ ಅಂಶಕ್ಕೆ ಭಾರತ ವಿರೋಧ ವ್ಯಕ್ತಪಡಿಸುತ್ತಿದೆ.
ಮತ್ತಷ್ಟು
ಶೀಘ್ರವೇ ಪಾಕ್ ಸರ್ಕಾರ ಪತನ: ಷರೀಫ್
ಹೈಟಿ - ಗುಸ್ತಾವ್ ದಾಳಿಗೆ 77 ಬಲಿ
ಬ್ಯಾಂಕಾಕ್: ತುರ್ತು ಪರಿಸ್ಥಿತಿ ಘೋಷಣೆ
ಜಪಾನ್ ಪ್ರಧಾನಿ ರಾಜೀನಾಮೆ
'ಅಣುಬಂಧ'ಕ್ಕೆ ಎನ್‌ಎಸ್‌ಜಿ ಅಪಸ್ವರ ?
ಚೀನಾ ಭಾರೀ ಭೂಕಂಪಕ್ಕೆ 27 ಬಲಿ