ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಅಫ್ಘಾನಿಸ್ತಾನ ಗಡಿಯಲ್ಲಿ ಪಾಕಿಸ್ತಾನಿ ಹಳ್ಳಿಯೊಂದರಲ್ಲಿ ಬುಧವಾರ ಅಮೆರಿಕ ಪಡೆಗಳು ನಡೆಸಿದ ದಾಳಿಯಿಂದ ಮಕ್ಕಳು, ಮಹಿಳೆಯರು ಸೇರಿದಂತೆ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಪಾಕಿಸ್ತಾನದ ಉಗ್ರವಾದ ಪೀಡಿತ ದಕ್ಷಿಣ ವಜೀರಿಸ್ತಾನ ಪ್ರದೇಶದಲ್ಲಿ ಈ ರೀತಿಯ ಅತಿಕ್ರಮಣವಾಗಿರುವ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಅಫ್ಘಾನಿಸ್ತಾನದಲ್ಲಿರುವ ಅಮೆರಿಕ ನೇತೃತ್ವದ ಮೈತ್ರಿಕೂಟ ತಿಳಿಸಿದೆ. ಇಂಥದ್ದೊಂದು ದಾಳಿ ನಡೆದಿದೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆಯಾದರೂ, ಇದರಲ್ಲಿ ವಿದೇಶೀ ಪಡೆಗಳು ಭಾಗಿಯಾಗಿವೆಯೇ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.

ಉಗ್ರವಾದದ ವಿರುದ್ಧ ಜಂಟಿ ಹೋರಾಟ ನಡೆಸುತ್ತಿರುವ ಪಾಕಿಸ್ತಾನ ಮತ್ತು ಅಮೆರಿಕ ನಡುವೆ, ಗಡಿಯಾಚೆಗಿನ ದಾಳಿ ಕುರಿತಂತೆ ಇತ್ತೀಚೆಗೆ ವೈಮನಸ್ಯ ಏರ್ಪಟ್ಟಿತ್ತು. ಇದೀಗ ಈ ಹೊಸ ದಾಳಿಯ ಕುರಿತು ಸೇನಾಪಡೆಗಳು ತನಿಖೆ ನಡೆಸುತ್ತಿವೆ ಎಂದು ಸೇನಾ ವಕ್ತಾರ ಮೇಜರ್ ಮುರಾದ್ ಖಾನ್ ತಿಳಿಸಿದ್ದಾರೆ.
ಮತ್ತಷ್ಟು
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಷರೀಫ್ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ
ಅಣು ಒಪ್ಪಂದಕ್ಕೆ ಚೀನಾ ತಕರಾರು
ಶೀಘ್ರವೇ ಪಾಕ್ ಸರ್ಕಾರ ಪತನ: ಷರೀಫ್
ಹೈಟಿ - ಗುಸ್ತಾವ್ ದಾಳಿಗೆ 77 ಬಲಿ
ಬ್ಯಾಂಕಾಕ್: ತುರ್ತು ಪರಿಸ್ಥಿತಿ ಘೋಷಣೆ