ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಪ್ರಧಾನಿ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಪ್ರಧಾನಿ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
ಪಾಕಿಸ್ತಾನ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಬೆಂಗಾವಲು ಪಡೆ ಮೇಲೆ ಬುಧವಾರ ಗುಂಡಿನ ದಾಳಿ ನಡೆದಿದ್ದು, ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಹಲವು ಸುತ್ತಿನ ಗುಂಡಿನ ದಾಳಿ ನಡೆಸಲಾಯಿತು. ಪ್ರಧಾನಿ ಸುರಕ್ಷಿತವಾಗಿದ್ದಾರೆ ಎಂದು ಅವರ ವಕ್ತಾರ ಜಾಹಿದ್ ಬಶೀರ್ ತಿಳಿಸಿದ್ದು, ಕನಿಷ್ಠ ಮೂರು ಗುಂಡುಗಳು ಗಿಲಾನಿ ಅವರ ವಾಹನಕ್ಕೆ ತಗುಲಿದೆ ಎಂದು ಹೇಳಿದ್ದಾರೆ.

ರಾಜಧಾನಿ ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಗಿಲಾನಿ ಅವರು ಲಾಹೋರ್ ಪ್ರವಾಸ ಮುಗಿಸಿ ಮರಳುತ್ತಿದ್ದರು.

ಗಿಲಾನಿ ಮಾಜಿ ಪ್ರಧಾನಿ ಬೇನಜೀರ್ ಭುಟ್ಟೋ ಪಕ್ಷದ ಹಿರಿಯ ಸದಸ್ಯರಾಗಿದ್ದಾರೆ. ಈ ಹಿಂದೆ ಭುಟ್ಟೋ ಅವರನ್ನು ಆತ್ಮಹತ್ಯಾ ಬಾಂಬ್ ದಾಳಿ ಹಾಗೂ ಗುಂಡಿನ ದಾಳಿಯಿಂದ ಉಗ್ರಗಾಮಿಗಳು ಕೊಂದಿದ್ದರು.
ಮತ್ತಷ್ಟು
ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಷರೀಫ್ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ
ಅಣು ಒಪ್ಪಂದಕ್ಕೆ ಚೀನಾ ತಕರಾರು
ಶೀಘ್ರವೇ ಪಾಕ್ ಸರ್ಕಾರ ಪತನ: ಷರೀಫ್
ಹೈಟಿ - ಗುಸ್ತಾವ್ ದಾಳಿಗೆ 77 ಬಲಿ