ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ: ಭಾರತಕ್ಕೆ 'ಕೈ' ಕೊಟ್ಟ ಬುಷ್ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ: ಭಾರತಕ್ಕೆ 'ಕೈ' ಕೊಟ್ಟ ಬುಷ್ ?
ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಗುರುವಾರ ವಿಯೆನ್ನಾದಲ್ಲಿ ಎನ್‌ಎಸ್‌ಜಿ ಸಭೆ ನಡೆಯಲಿದ್ದು, ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಭಾರತದ ಆಶಯದ ವಿರುದ್ಧವಾಗಿ ಹೇಳಿಕೆ ನೀಡಿರುವ ಅಂಶ ಬಯಲಾಗಿದೆ.

ಅಣು ಒಪ್ಪಂದದ ಬಳಿಕ ಭಾರತ ಪರಮಾಣು ಪರೀಕ್ಷೆಯನ್ನು ನಡೆಸಿದರೆ ಭಾರತಕ್ಕೆ ಪರಮಾಣು ಪೂರೈಕೆ ಮಾಡಲಾಗುವುದಿಲ್ಲ ಎಂದು ಬುಷ್ ಅಮೆರಿಕ ಕಾಂಗ್ರೆಸ್‌ಗೆ ಕಳುಹಿಸಿರುವ 26 ಪುಟಗಳ ಪತ್ರದಲ್ಲಿ ತಿಳಿಸಿದ್ದು, ಭಾರತ ಅಮೆರಿಕ ಪರಮಾಣು ಒಪ್ಪಂದದ ಕುರಿತಾಗಿ ಪರಮಾಣು ಪೂರೈಕಾ ರಾಷ್ಟ್ರಗಳೊಂದಿಗೆ ಗುರುವಾರ ನಡೆಯಲಿರುವ ಸಭೆಯ ಮುನ್ನಾದಿನ ಅಮೆರಿಕ ಪತ್ರಿಕೆಗಳು ಈ ಪತ್ರದಲ್ಲಿನ ವಿಷಯಗಳನ್ನು ಬಹಿರಂಗಗೊಳಿಸಿವೆ.

ವಿಯೆನ್ನಾದಲ್ಲಿ ಇಂದು ಪ್ರಾರಂಭಗೊಳ್ಳಲಿರುವ ಎನ್ಎಸ್‌ಜಿ ಸಭೆಯ ಮುಂದಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮತ್ತು ರಾಷ್ಟ್ರೀಯ ಭದ್ರತಾ ಸಲಹಾಗಾರ ಎಂ.ಕೆ.ನಾರಾಯಣನ್ ಅವರೊಂದಿಗೆ ಚರ್ಚೆ ನಡೆಸಿದ್ದರು.

ಆಗಸ್ಟ್ 2007ರಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು, ಭವಿಷ್ಯದಲ್ಲಿ ಪರಮಾಣು ಪರೀಕ್ಷೆ ನಡೆಸಲು ಈ ಒಪ್ಪಂದವು ಅಡ್ಡಿ ಮಾಡುವುದಿಲ್ಲ ಎಂದು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದ್ದರು.

ಆದರೆ, ಭಾರತ ಅಮೆರಿಕ ಒಪ್ಪಂದವು ದೇಶದ ಪರಮಾಣು ಪರೀಕ್ಷೆಗೆ ಅಡ್ಡಿ ಉಂಟುಮಾಡುವುದಿಲ್ಲ ಎಂಬ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರದ ಭರವಸೆಯನ್ನು ಈ ಪತ್ರದ ವಿಷಯಗಳು ಹುಸಿ ಮಾಡಿದಂತಾಗಿದೆ.

ಏನೇ ಆದರೂ, ಪರಮಾಣು ಪೂರೈಕೆಯು ಪರಮಾಣು ಮಾರಾಟ ಸಮಸ್ಯೆ ಮುಂತಾದ ಫಲಿತಾಂಶವನ್ನು ತರದೇ ಇದ್ದಲ್ಲಿ ಅಮೆರಿಕವು ಭಾರತಕ್ಕೆ ಸಹಕಾರ ನೀಡುವುದಾಗಿ ಅಮೆರಿಕ ವಿದೇಶಾಂಗ ವ್ಯವಹಾರ ಸಮಿತಿಯ ಮುಖ್ಯಸ್ಥ ಹಾವರ್ಡ್ ಎಲ್.ಬರ್ಮನ್ ಹೇಳಿದ್ದಾರೆ.
ಮತ್ತಷ್ಟು
ಪಾಕ್ ಪ್ರಧಾನಿ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಷರೀಫ್ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ
ಅಣು ಒಪ್ಪಂದಕ್ಕೆ ಚೀನಾ ತಕರಾರು
ಶೀಘ್ರವೇ ಪಾಕ್ ಸರ್ಕಾರ ಪತನ: ಷರೀಫ್