ರಷ್ಯಾದ ದಾಳಿಯಿಂದ ತತ್ತರಿಸಿರುವ ಜಾರ್ಜಿಯಾಕ್ಕೆ ಒಂದು ಬಿಲಿಯನ್ ಡಾಲರ್ ಹಣಕಾಸಿನ ನೆರವು ನೀಡುವುದಾಗಿ ಯುನೈಟೆಡ್ ಸ್ಟೇಟ್ಸ್ (ಸಂಯುಕ್ತ ರಾಜ್ಯ) ಗುರುವಾರ ಘೋಷಿಸಿದೆ.
ಆದರೆ ಇದು ಕೇವಲ ಆರ್ಥಿಕ ನೆರವು ಮಾತ್ರವಾಗಿರುವುದಾಗಿ ತಿಳಿಸಿರುವ ಯುನೈಟೆಡ್ ಸ್ಟೇಟ್ಸ್, ಇದರಲ್ಲಿ ಯಾವುದೇ ಮಿಲಿಟರಿ ನೆರವು ಸೇರಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಡಿಕ್ ಚೆನೈ ಅವರು ಸ್ಪಷ್ಟಪಡಿಸಿದ್ದಾರೆ.
ಈ ಮೊದಲು ಜಾರ್ಜಿಯಾ ಮತ್ತು ಉಕ್ರೇನ್‌ಗಳು ಮಾಜಿ ಸೋವಿಯತ್ ರಷ್ಯಾ ಒಕ್ಕೂಟಕ್ಕೆ ಬೆಂಬಲವನ್ನು ನೀಡುತ್ತಿದ್ದವು .ಆದರೆ ಇದೀಗ ಅಮೆರಿಕ ಮಾತ್ರ ಕೆಲವು ವರ್ಷಗಳಿಂದ ಜಾರ್ಜಿಯಾವನ್ನು ತನ್ನತ್ತ ಸೆಳೆದುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ರೀತಿಯ ನೆರವನ್ನು ನೀಡುವ ಮೂಲಕ ರಷ್ಯಾದ ವಿರುದ್ಧ ಎತ್ತಿಕಟ್ಟುವ ಕೆಲಸದಲ್ಲಿ ನಿರತವಾಗಿತ್ತು.
ನಾವು ಜಾರ್ಜಿಯಾಕ್ಕೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತೇವೆ,ಇಡೀ ಜಗತ್ತು ಮುಕ್ತ ವಿಶ್ವವಾಗಬೇಕು. ಆ ನಿಟ್ಟಿನಲ್ಲಿ ಪ್ರಜಾತಂತ್ರ ಜಾರ್ಜಿಯಾಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
|