ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬ್ಯಾಂಕಾಕ್: ರಾಜೀನಾಮೆಗೆ ಪ್ರಧಾನಿ ನಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕಾಕ್: ರಾಜೀನಾಮೆಗೆ ಪ್ರಧಾನಿ ನಕಾರ
ಥಾಯ್‌‌ಲ್ಯಾಂಡ್‌ ರಾಜಕಾರಣದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟು ನಾಚಿಕೆಗೇಡಿತನದ್ದಾಗಿರುವುದಾಗಿ ಹೇಳಿರುವ ಪ್ರಧಾನಿ ಸಮಕ್ ಸುಂದರವೇಜ್ ಅವರು, ಯಾವುದೇ ಕಾರಣಕ್ಕೂ ಸಂಸತ್ ಅನ್ನು ವಿಸರ್ಜಿಸುವುದಾಗಿಲಿ, ರಾಜೀನಾಮೆ ನೀಡುವ ಪ್ರಶ್ನೆಯಾಗಲಿ ಇಲ್ಲ ಎಂದು ಗುರುವಾರದಂದು ಸ್ಪಷ್ಟಪಡಿಸಿದ್ದಾರೆ.

ಆನಿಟ್ಟಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸರ್ಕಾರಿ ವಿರೋಧಿ ಪ್ರತಿಭಟನೆಕಾರರ ಬೇಡಿಕೆಗಳಿಗೆ ತಾವು ಮಣಿಯುದಿಲ್ಲ ಎಂದು ಸಮಕ್ ಅವರು ಕಟುವಾಗಿ ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ರಾಷ್ಟ್ರದ ಮೇಲೆ ಸಮಕ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು. ಏತನ್ಮಧ್ಯೆ ಸಾವಿರಾರು ಕಾರ್ಯಕರ್ತರು ಸಮಕ್ ಕಚೇರಿ ಆವರಣದ ಮೈದಾನ ವನ್ನು ಆಕ್ರಮಿಸಿಕೊಂಡಿದ್ದಾರೆ. ಪ್ರತಿಭಟನೆಕಾರರು ಸರ್ಕಾರಿ ಕಚೇರಿಯ ಮೈದಾನದಲ್ಲೇ ಶಿಬಿರ ಹೂಡಿದ್ದರಿಂದ ಸಮಕ್ ಕಚೇರಿಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

ತಾವು ಹೊರಗಡೆಯಿದ್ದು ಸರಿಯಾಗಿ ಕೆಲಸ ಮಾಡಲು ಸಾದ್ಯವಾಗುತ್ತಿಲ್ಲ. ಥಾಯ್‌‌ಲ್ಯಾಂಡ್ ಅನ್ನು ಇಡೀ ಪ್ರಪಂಚ ವೀಕ್ಷಿಸುತ್ತಿದ್ದು, ಇದು ನಾಚಿಕೆಗೇಡಲ್ಲವೇ ಎಂದು ಸಮಕ್ ಪ್ರಶ್ನಿಸಿದ್ದಾರೆ,

ತುರ್ತುಪರಿಸ್ಥಿತಿ ಆದೇಶವನ್ನು ಉಲ್ಲಂಘಿಸಿ ಕಚೇರಿ ಆವರಣದಲ್ಲಿ ಉಳಿಯುವ ಮ‌ೂಲಕ ಸರ್ಕಾರಿ ವಿರೋಧಿ ಪ್ರತಿಭಟನೆಕಾರರು ಸಮಕ್ ಅವರನ್ನು ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ. ಸೇನೆ ಕೂಡ ಪ್ರತಿಭಟನೆಕಾರರ ವಿರುದ್ಧ ಕಾರ್ಯಾಚರಣೆಗಿಳಿಯಲು ವಿರೋಧ ವ್ಯಕ್ತಪಡಿಸಿದೆ.
ಮತ್ತಷ್ಟು
ಜಾರ್ಜಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು:ಅಮೆರಿಕ
ಅಣುಬಂಧ: ಭಾರತಕ್ಕೆ 'ಕೈ' ಕೊಟ್ಟ ಬುಷ್ ?
ಪಾಕ್ ಪ್ರಧಾನಿ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ
ಪಾಕಿಸ್ತಾನದಲ್ಲಿ ಅಮೆರಿಕ ಪಡೆ ದಾಳಿ: 15 ಸಾವು
ಅಣುಬಂಧ: ಎನ್ಎಸ್‌ಜಿ ಒಮ್ಮತಕ್ಕೆ ಅಮೆರಿಕ ಶತಪ್ರಯತ್ನ
ಷರೀಫ್ ಭ್ರಷ್ಟಾಚಾರ ಪ್ರಕರಣಕ್ಕೆ ಮರುಜೀವ