ಚೀನಾದ ನೈರುತ್ಯ ಭಾಗವಾದ ಸಿಚುವಾನ್‌ನಲ್ಲಿ ಮೇ 12ರಂದು ಸಂಭವಿಸಿದ ಭೀಕರ ಭೂಕಂಪನದಲ್ಲಿ ಕನಿಷ್ಠ 87 ಸಾವಿರ ಜನರು ಬಲಿಯಾಗಿರುವುದಾಗಿ ಗುರುವಾರಂದು ತಜ್ಞರು ಬಿಡುಗಡೆಗೊಳಿಸಿರುವ ನೂತನ ವರದಿಯಲ್ಲಿ ತಿಳಿಸಿದ್ದಾರೆ.
ಜುಲೈ ಮಧ್ಯದವರೆಗೆ ಭೂಕಂಪದಲ್ಲಿ ಸತ್ತವರ ಸಂಖ್ಯೆ 69ಸಾವಿರಕ್ಕೇರಿತ್ತು, ಅಲ್ಲದೇ ಅದರಲ್ಲಿ 18ಸಾವಿರ ಜನರು ನಾಪತ್ತೆಯಾಗಿದ್ದರು ಎಂದು ನ್ಯಾಷನಲ್ ವೆನ್‌ಚುವಾನ್ ಭೂಕಂಪ ತಜ್ಞರ ಸಮಿತಿ ವಿವರಿಸಿದೆ.
ಭೂಕಂಪ ನಿರಂತರವಾಗಿ ಮೂರು ತಿಂಗಳವರೆಗೆ ಆಗಾಗ ಸಂಭವಿಸಿದ ಪರಿಣಾಮ,ನಾಪತ್ತೆಯಾದವರು ಇದರಲ್ಲಿ ಬದುಕುಳಿದಿರುವ ಸಾಧ್ಯತೆ ತುಂಬಾ ಕಡಿಮೆ ಎಂದು ಹೇಳಿದೆ.
ಆದರೂ ಮೇ ತಿಂಗಳಿನಲ್ಲಿ ಸಂಭವಿಸಿದ ಭೂಕಂಪನದಲ್ಲಿ ಬಲಿಯಾದವರ ಸಂಖ್ಯೆ 87ಸಾವಿರಕ್ಕಿಂತ ಕಡಿಮೆಯೇನಲ್ಲ ಎಂದು ಅದು ಹೇಳಿದೆ.
8.0ರಷ್ಟು ಭಾರೀ ಪ್ರಮಾಣದಲ್ಲಿ ಸಂಭವಿಸಿದ ಈ ಭೂಕಂಪದಿಂದಾಗಿ ಅಂದಾಜು 42 ಮಿಲಿಯನ್ ಜನರು ತೊಂದರೆ ಅನುಭವಿಸುಂತಾಗಿತ್ತು. ಒಟ್ಟು 40ಸಾವಿರ ಕಿ.ಮೀ.ವರೆಗೆ ಭೂಕಂಪದ ಹಾನಿ ಉಂಟಾಗಿತ್ತು. ಈಗಲೂ ಚೀನಾ ಸರಕಾರದಿಂದ ಪರಿಹಾರ ಕಾರ್ಯ ಮುಂದುವರಿದಿದೆ.
|