ಅಮೆರಿಕದ ಅಧ್ಯಕ್ಷ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಚುನಾವಣಾ ಅಖಾಡ ಮತ್ತಷ್ಟು ರಂಗೇರಿದ್ದು, ಇದೀಗ ರಿಪಬ್ಲಿಕನ್ ಪಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅಲಾಸ್ಕಾ ರಾಜ್ಯದ ಗವರ್ನರ್ ಸಾರಾ ಪಾಲಿನ್ ಅವರನ್ನು ಆಯ್ಕೆ ಮಾಡಲಾಗಿದೆ.
ವಿರೋಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಬರಾಕ್ ಒಬಾಮಾ ಮತ್ತು ಆಡಳಿತ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಹಿರಿಯ ಸೆನೆಟರ್ ಜಾನ್ ಮೆಕೈನ್ ಚುನಾವಣಾ ಕಣದಲ್ಲಿದ್ದಾರೆ.
ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಒಬಾಮಾ ಅವರು ವಿದೇಶಾಂಗ ವ್ಯವಹಾರಗಳ ತಜ್ಞ ಜೋಸಫ್ ಬಿಡೆನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರೆ, ಇದೀಗ ಮೆಕೈನ್ ಅವರು ಸಾರಾ ಪಾಲಿನ್ ಅವರನ್ನು ಅಖಾಡಕ್ಕೆ ಇಳಿಸಿದ್ದಾರೆ.
ಆ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮತ್ತಷ್ಟು ರಂಗೇರಿದಂತಾಗಿದೆ. ಹಿರಿಯ ಸೆನೆಟರ್ ಜಾನ್ ಮೆಕೈನ್ ಅವರು, ಮಹಿಳಾ ಮತಗಳನ್ನು ಸೆಳೆಯಲು ಸಾರಾ ಪಾಲಿನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಆದರೂ ಸದ್ಯದ ಸ್ಥಿತಿಯಲ್ಲಿ ಒಬಾಮಾ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಅಧ್ಯಕ್ಷ ಗದ್ದುಗೆ ಯಾರ ಪಾಲಿಗೆ ಒಲಿಯದೆ ಎಂಬುದನ್ನು ಕಾದು ನೋಡಬೇಕಾಗಿದೆ.
|