ರಸಿಕಲೋಲ ಡೆಟ್ರೋಯಿಟ್‌ನ ಮೇಯರ್ ಕ್ವಾಮೆ ಕಿಲ್‌ಪ್ಯಾಟ್ರಿಕ್ ಅವರಿಗೆ ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನಾಲ್ಕು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಡೆಟ್ರೋಯಿಟ್‌ನ 38ರ ಹರೆಯದ ಕ್ವಾಮೆ ಕಿಲ್‌ಪ್ಯಾಟ್ರಿಕ್ ಇದೀಗ ಲೈಂಗಿಕ ಹಗರಣದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿರುವ ಹಿನ್ನೆಲೆಯಲ್ಲಿ ತನ್ನ ಮೇಯರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು,ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ವಿಧಿಸಿದ 4 ತಿಂಗಳ ಸೆರೆಮನೆವಾಸ ಶಿಕ್ಷೆಯನ್ನು ಸ್ವೀಕರಿಸುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಕಚೇರಿಯ ಮುಖ್ಯ ನೌಕರೋರ್ವಳೊಂದಿಗೆ ಮೇಯರ್ ಲೈಂಗಿಕ ಹಗರಣದಲ್ಲಿ ಭಾಗಿಯಾದ ಪ್ರಕರಣದ ಕುರಿತು ತನಿಖೆ ನಡೆಸಿದ್ದು, ಅದರಲ್ಲಿ ಆರೋಪ ಸಾಬೀತಾಗಿರುವ ಪರಿಣಾಮ ಶಿಕ್ಷೆ ವಿಧಿಸಲಾಗಿರುವುದಾಗಿ ನ್ಯಾಯಾಧೀಶರು ಹೇಳಿದರು.
ನಾಲ್ಕು ಜೈಲು ಶಿಕ್ಷೆಯಲ್ಲದೇ,ಒಂದು ಮಿಲಿಯನ್ ಡಾಲರ್ ಪರಿಹಾರ ನೀಡಬೇಕಾಗಿಯೂ ನ್ಯಾಯಾಧೀಶರು ಮೇಯರ್‌ಗೆ ಸೂಚಿಸಿದರು.
ನೀವು ಯಾವ ಪ್ರಕರಣದಲ್ಲಿ ದೋಷಿತರಾಗಿದ್ದೀರಿ ಎಂಬುದು ನಿಮಗೆ ಅರ್ಥವಾಗಿದೆಯಲ್ಲ, ಆದರೂ ನಿಮಗೆ ಪ್ರಕರಣದ ಕುರಿತು ಮುಂದುವರಿಯಲು ಸಂವಿಧಾನಬದ್ಧ ಹಕ್ಕನ್ನು ನೀಡಲಾಗಿದೆ ಎಂದು ವೇನೆ ಕೌಂಟಿಯ ಮಿಚಿಗನ್ ನ್ಯಾಯಾಧೀಶರು ತಮಗೆ ತಿಳಿಸಿರುವುದಾಗಿ ಮೇಯರ್ ಹೇಳಿದರು.
|