ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪದಚ್ಯುತ ನ್ಯಾಯಾಧೀಶರ ಮರುನೇಮಕ ಇಲ್ಲ:ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪದಚ್ಯುತ ನ್ಯಾಯಾಧೀಶರ ಮರುನೇಮಕ ಇಲ್ಲ:ವರದಿ
ಪದಚ್ಯುತ ನ್ಯಾಯಾಧೀಶ ಇಫ್ತಿಕರ್ ಚೌಧುರಿ ಸೇರಿದಂತೆ ಸಹ ನ್ಯಾಯಧೀಶರನ್ನು ಮರುನೇಮಕ ಮಾಡದಿರುವಂತೆ ಪಾಕಿಸ್ತಾನದ ಆಡಳಿತರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ)ನಿರ್ಧರಿಸಿರುವುದಾಗಿ ದಿ ನ್ಯೂಸ್ ಡೈಲಿಯ ಶುಕ್ರವಾರದ ವರದಿ ತಿಳಿಸಿದೆ.

ಪದಚ್ಯುತ ನ್ಯಾಯಾಧೀಶರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಅವರು ಮಾಹಿತಿ ನೀಡಿರುವುದಾಗಿ ಹೇಳಿರುವ ದಿ ನ್ಯೂಸ್ ಪಿಪಿಪಿ ವಕ್ತಾರ ಫರಾತುಲ್ಲಾ ಬಾಬರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿಯಲ್ಲಿ ಬಹಿರಂಗಗೊಳಿಸಿದೆ.

ಅಲ್ಲದೇ ಪದಚ್ಯುತ ನ್ಯಾಯಾಧೀಶರ ಮರುನೇಮಕಕ್ಕೆ ಸಂಬಂಧಿಸಿದಂತೆ ಸಾರ್ವಜನಿಕವಾಗಿ ಯಾವುದೇ ಹೇಳಿಕೆಯನ್ನು ನೀಡಬಾರದು ಎಂದು ಪಿಪಿಪಿಯ ಹಿರಿಯ ಮುಖಂಡರಿಗೆ ಪ್ರಧಾನಿ ಗಿಲಾನಿ ಅವರು ಸೂಚನೆ ನೀಡಿರುವುದಾಗಿ ನ್ಯೂಸ್ ವರದಿ ಪ್ರಕಟಿಸಿದೆ.

ಕಳೆದ ನವೆಂಬರ್ 3ರಂದು ಅಂದಿನ ರಾಷ್ಟ್ಟಾಧ್ಯಕ್ಷ ಪರ್ವೇಜ್ ಮುಷರಪ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮುನ್ನ ಸುಮಾರು 60ಮಂದಿ ನ್ಯಾಯಾಧೀಶರನ್ನು ಪದಚ್ಯುತಗೊಳಿಸಲಾಗಿತ್ತು.

ಏತನ್ಮಧ್ಯೆ ಪಿಪಿಪಿ ಹಾಗೂ ಆಡಳಿತ ಮೈತ್ರಿಕೂಟದ ಮಾಜಿ ಪಾರ್ಟನರ್ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್(ಪಿಎಂಎಲ್‌ಎನ್)ಗೆ ಪದಚ್ಯುತ ನ್ಯಾಯಾಧೀಶರನ್ನು ಮರುನೇಮಕ ಮಾಡುವುದಾಗಿ ಕಳೆದ ಮಾರ್ಚ್ ತಿಂಗಳಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಆದರೆ ಇದೀಗ ಪದಚ್ಯುತ ನ್ಯಾಯಾಧೀಶರ ಮರುನೇಮಕಕ್ಕೆ ಪಿಪಿಪಿ ಮೀನಮೇಷ ಎಣಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪಿಎಂಎಲ್‌ಎನ್ ಅಧ್ಯಕ್ಷ ನವಾಜ್ ಷರೀಫ್ ಅವರು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ವಾಪಸು ಪಡೆದಿದ್ದರು.
ಮತ್ತಷ್ಟು
ವಾಷಿಂಗ್ಟನ್: ರಸಿಕಲೋಲ ಮೇಯರ್‌ಗೆ ಜೈಲು ಶಿಕ್ಷೆ
ಯುಎಸ್ ಚುನಾವಣೆ: ಉಪಾಧ್ಯಕ್ಷ ಸ್ಥಾನಕ್ಕೆ ಪಾಲಿನ್
ಚೀನಾ ಭೂಕಂಪ:ಬಲಿಯಾದವರ ಸಂಖ್ಯೆ 87 ಸಾವಿರ
ಅಣುಬಂಧ: ಎನ್‌ಎಸ್‌ಜಿ ಪರಿಶೀಲನೆಯಲ್ಲಿ ಕರಡು
ಬ್ಯಾಂಕಾಕ್: ರಾಜೀನಾಮೆಗೆ ಪ್ರಧಾನಿ ನಕಾರ
ಜಾರ್ಜಿಯಾಕ್ಕೆ 1 ಬಿಲಿಯನ್ ಡಾಲರ್ ನೆರವು:ಅಮೆರಿಕ