ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಇದೀಗ ಯುನೈಟೆಡ್ ಸ್ಟೇಟ್ಸ್ ಪರಮಾಣು ಇಂಧನ ಕುರಿತಾಗಿ ನೀಡಿರುವ ಹೇಳಿಕೆ ಕುರಿತಾಗಿ ಭಾರತದ ಅಧಿಕಾರಿಗಳನ್ನು ಚಿಂತೆಯ ಮಡಿಲಿಗೆ ದೂಡಿದೆ.
ನಾಗರಿಕ ಪರಮಾಣು ಒಪ್ಪಂದದ ಕುರಿತು ಪರಿಷ್ಕೃತ ಕರಡು ತಿದ್ದುಪಡಿಗೆ ಸಂಬಂಧಿಸಿದಂತೆ ಅಮೆರಿಕ ಎನ್‌ಎಸ್‌ಜಿಗೆ ಸಲ್ಲಿಸಿರುವ ರಹಸ್ಯ ಪತ್ರದಲ್ಲಿ ಅಣುಪರೀಕ್ಷೆ ನಡೆಸಿದಲ್ಲಿ, ಒಪ್ಪಂದವನ್ನು ರದ್ದುಗೊಳಿಸುಂತೆ ಅದು ಸಲಹೆ ನೀಡಿರುವುದಾಗಿ ಆಂಗ್ಲ ದೈನಿಕವೊಂದು ವರದಿಯೊಂದರಲ್ಲಿ ಬಹಿರಂಗಗೊಳಿಸಿತ್ತು.
ಅಲ್ಲದೇ ಪರಮಾಣು ಇಂಧನದ ಕುರಿತು ಭಾರತ ಬೇರೆಯ ತೆರನಾದ ವ್ಯಾಖ್ಯಾನ ನೀಡಿರುವುದಾಗಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್ ಪ್ರತಿಕ್ರಿಯೆ ನೀಡಿರುವುದಾಗಿ ಭಾರತದ ಅಧಿಕಾರಿಗಳು ದೂರಿದ್ದಾರೆ.
123ಒಪ್ಪಂದದ ಪ್ರಕಾರ ಇಂಧನ ಪೂರೈಕೆ ಕುರಿತು ಭರವಸೆ ನೀಡಲಾಗಿತ್ತು. ಆದರೆ 123 ನೆಗೋಶಿಯೇಶನ್ಸ್ ಪರಮಾಣು ಪರೀಕ್ಷೆ ಕುರಿತಾಗಿ ಯಾವುದೇ ಸ್ಪಷ್ಟ ನಿರ್ಧಾರವನ್ನು ಉಲ್ಲೇಖಿಸಿರಲಿಲ್ಲವಾಗಿತ್ತು ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದವನ್ನು ಅಮೆರಿಕನ್ನರು ರಾಜಕೀಯ ದಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
|