ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಮ್ಮತಿ ಪಡೆಯುವ ನಿಟ್ಟಿನಲ್ಲಿ, ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಶುಕ್ರವಾರ ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಎನ್‌ಎಸ್‌ಜಿ ತಿಳಿಸಿದೆ.

ಅಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಅಣು ಪರೀಕ್ಷೆಯ ಕುರಿತ ತನ್ನ ಏಕಪಕ್ಷೀಯ ತಾತ್ಕಾಲಿಕ ನಿಲುಗಡೆಗೂ ಬದ್ಧವಾಗಿದೆ ಮತ್ತು ಭಾರತವು ಎಂದಿಗೂ ಪ್ರಥಮವಾಗಿ ಅಣ್ವಸ್ತ್ರಗಳನ್ನು ಬಳಸದು ಎಂಬ ತನ್ನ ನೀತಿಗೆ ಬದ್ಧವಾಗಿದೆ ಎಂದು ಪ್ರಣಬ್ ಹೇಳಿಕೆ ನೀಡಿದ್ದರು.

ಅಲ್ಲದೇ ವಿದಳನ ಸಾಮಾಗ್ರಿ ನಿಯಂತ್ರಣ ಒಪ್ಪಂದಕ್ಕೂ (ಫಿಸೈಲ್ ಮೆಟಿರಿಯಲ್ಸ್ ಕಟ್ ಒಫ್ ಟ್ರೀಟಿ) ಬದ್ಧವಾಗಿರುವುದಾಗಿ ಪ್ರಣಬ್ ಅಣು ಒಪ್ಪಂದಕ್ಕೆ ಪೂರಕವಾದ ಹೇಳಿಕೆ ನೀಡಿದ್ದಾರೆ.

ಇದೀಗ ವಿಯೆನ್ನಾದಲ್ಲಿ ನಡೆಯುತ್ತಿರುವ 2ನೇ ದಿನದ ಎನ್ಎಸ್‌ಜಿ ಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ದೊರೆಯುವ ನಿರೀಕ್ಷೆ ಇರುವುದಾಗಿ ಭಾರತ ಭರವಸೆ ವ್ಯಕ್ತಪಡಿಸಿದೆ.

ಅದಕ್ಕೆ ಪೂರಕ ಎಂಬಂತೆ ಜಪಾನ್ ಮತ್ತು ಚೀನಾ ದೇಶಗಳೆರಡೂ ಈ ಮೊದಲು ವಿರೋಧ ವ್ಯಕ್ತಪಡಿಸಿದ್ದರೂ ಕೂಡ,ಇಂದಿನ ಸಭೆಯಲ್ಲಿ ತಮ್ಮ ಸಮ್ಮತಿ ಇರುವುದಾಗಿ ಹೇಳಿವೆ.

ಆಸ್ಟ್ರಿಯಾಕ್ಕೆ ಅಮೆರಿಕ ಒತ್ತಡ: ಅಣು ಒಪ್ಪಂದದ ಪರಿಷ್ಕೃತ ಕರಡಿಗೆ ಆಸ್ಟ್ರಿಯಾ ತನ್ನ ವಿರೋಧವನ್ನು ಮುಂದುವರಿಸಿರುವ ಕಾರಣ,ಒಪ್ಪಂದಕ್ಕೆ ಬೆಂಬಲ ನೀಡುವಂತೆ ಅಮೆರಿಕ ಆಸ್ಟ್ರಿಯಾದ ಮೇಲೆ ಒತ್ತಡ ಹೇರಿದೆ.
ಮತ್ತಷ್ಟು
ನಾಳೆ ಪಾಕ್ ಅಧ್ಯಕ್ಷ ಚುನಾವಣೆ: ಕಣದಲ್ಲಿ ಜರ್ದಾರಿ
ಪರಮಾಣು ಇಂಧನ-ಅಮೆರಿಕ ನಿಲುವಿಗೆ ಭಾರತ ಆಘಾತ
ಪದಚ್ಯುತ ನ್ಯಾಯಾಧೀಶರ ಮರುನೇಮಕ ಇಲ್ಲ:ವರದಿ
ವಾಷಿಂಗ್ಟನ್: ರಸಿಕಲೋಲ ಮೇಯರ್‌ಗೆ ಜೈಲು ಶಿಕ್ಷೆ
ಯುಎಸ್ ಚುನಾವಣೆ: ಉಪಾಧ್ಯಕ್ಷ ಸ್ಥಾನಕ್ಕೆ ಪಾಲಿನ್
ಚೀನಾ ಭೂಕಂಪ:ಬಲಿಯಾದವರ ಸಂಖ್ಯೆ 87 ಸಾವಿರ