ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > 'ಬ್ರೈಸೆ' ಆಸ್ಟ್ರೇಲಿಯಾ ಪ್ರಥಮ ಮಹಿಳಾ ಗವರ್ನರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಬ್ರೈಸೆ' ಆಸ್ಟ್ರೇಲಿಯಾ ಪ್ರಥಮ ಮಹಿಳಾ ಗವರ್ನರ್
ಮಹಿಳಾ ಹಕ್ಕುಗಳ ಮಾಜಿ ಕಾರ್ಯಕರ್ತೆ ಕ್ವೆಂಟಿನ್ ಬ್ರೈಸೆ (65ವ)ಅವರು ಶುಕ್ರವಾರದಂದು ಆಸ್ಟ್ರೇಲಿಯಾದ ಪ್ರಥಮ ಮಹಿಳಾ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯಪಾಲರಾಗಿ ಇಂದು ಅಧಿಕಾರ ಸ್ವೀಕರಿಸಿದ ಬ್ರೈಸೆ ಅವರು, ತಾವು ರಾಜ್ಯಪಾಲರಾಗಿಯೂ ಮಾನವ ಹಕ್ಕುಗಳ ತಮ್ಮ ಹೋರಾಟದ ಹಾದಿಯನ್ನು ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಬ್ರಿಟಿಷ್ ರಾಜಾಡಳಿತದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಭಾಜನರಾಗಿರುವ ಬ್ರೈಸೆ ಅವರು, ರಾಜಧಾನಿ ಕ್ಯಾನ್‌ಬೆರ್ರಾದಲ್ಲಿನ ಸಂಸತ್‌ನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಮಾರಂಭದಲ್ಲಿ ಪ್ರಧಾನಿ ಕೇವಿನ್ ರೂಡ್ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು, ನ್ಯಾಯಾಧೀಶರು ಭಾಗವಹಿಸಿದ್ದರು.

ಬಲಗೈಯಲ್ಲಿ ಕ್ರೈಸ್ತ ಸಮುದಾಯದ ಪವಿತ್ರ ಗ್ರಂಥವಾದ ಬೈಬಲ್ ಅನ್ನು ಹಿಡಿದು ಬ್ರೈಸೆ ಅವರು ಆಸ್ಟ್ರೇಲಿಯಾದ 25ನೇ ರಾಜ್ಯಪಾಲರಾಗಿ ಪ್ರತಿಜ್ಞೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸತ್ ಹೊರಭಾಗದಲ್ಲಿ ಗೌರವ ಸೂಚಕವಾಗಿ 21 ಕುಶಾಲು ತೋಪು ಹಾರಿಸಲಾಯಿತು.
ಮತ್ತಷ್ಟು
ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ನಾಳೆ ಪಾಕ್ ಅಧ್ಯಕ್ಷ ಚುನಾವಣೆ: ಕಣದಲ್ಲಿ ಜರ್ದಾರಿ
ಪರಮಾಣು ಇಂಧನ-ಅಮೆರಿಕ ನಿಲುವಿಗೆ ಭಾರತ ಆಘಾತ
ಪದಚ್ಯುತ ನ್ಯಾಯಾಧೀಶರ ಮರುನೇಮಕ ಇಲ್ಲ:ವರದಿ
ವಾಷಿಂಗ್ಟನ್: ರಸಿಕಲೋಲ ಮೇಯರ್‌ಗೆ ಜೈಲು ಶಿಕ್ಷೆ
ಯುಎಸ್ ಚುನಾವಣೆ: ಉಪಾಧ್ಯಕ್ಷ ಸ್ಥಾನಕ್ಕೆ ಪಾಲಿನ್