ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧಕ್ಕೆ 'ಆಸ್ಟ್ರಿಯಾ ಅಡ್ಡಗಾಲು'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧಕ್ಕೆ 'ಆಸ್ಟ್ರಿಯಾ ಅಡ್ಡಗಾಲು'
ಭಾರತ-ಅಮೆರಿಕ ಅಣು ಒಪ್ಪಂದದ ಕರಡು ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಬದಲಾವಣೆಯ ಅಗತ್ಯತೆ ಇದೆ ಎಂದು ಒತ್ತಿ ಹೇಳಿರುವ ಆಸ್ಟ್ರಿಯಾ ಇದೀಗ ಅಣುಬಂಧದ ವಿಚಾರದಲ್ಲಿ ಅಡ್ಡಗಾಲು ಹಾಕುತ್ತಿರುವುದು ಎನ್ಎಸ್‌ಜಿ ಗುಂಪಿಗೆ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಭಾರತ ಮತ್ತು ಅಮೆರಿಕ ಅಣು ಒಪ್ಪಂದದ ವಿಚಾರವಾಗಿ ಅಂಕಿತ ಹಾಕುವ ನಿಟ್ಟಿನಲ್ಲಿ ವಿಯೆನ್ನಾದಲ್ಲಿ 2ನೆ ಬಾರಿಗೆ ನಡೆಯುತ್ತಿರುವ ಎರಡನೇ ದಿನದ ಮಹತ್ವದ ಸಭೆಯಲ್ಲಿ ಆಸ್ಟ್ರಿಯಾ ತಕರಾರು ಎತ್ತುವ ಮೂಲಕ ಅಡ್ಡಿ ಉಂಟಾದಂತಾಗಿದೆ.

ಈಗಾಗಲೇ ಅಣು ಒಪ್ಪಂದವನ್ನು ಬೆಂಬಲಿಸುವಂತೆ ಅಮೆರಿಕ, ಆಸ್ಟ್ರಿಯಾದ ಮೇಲೆ ಒತ್ತಡ ಹೇರಿದ್ದರು ಕೂಡ ಒಮ್ಮತದ ಅಭಿಪ್ರಾಯದೊಂದಿಗೆ ಅಂತಿಮ ನಿರ್ಧಾರ ಕೈಗೊಳ್ಳುವಲ್ಲಿ ಎನ್‌ಎಸ್‌ಜಿ ಮೀನಮೇಷ ಎಣಿಸುವಂತಾಗಿದೆ.

ಇಷ್ಟೆಲ್ಲಾ ಅಡ್ಡಿ-ಆತಂಕಗಳ ನಡುವೆಯೂ ಭಾರತ ಮತ್ತು ಅಮೆರಿಕ ಆಶಾಭಾವವನ್ನು ವ್ಯಕ್ತಪಡಿಸಿವೆ. ಆದಕ್ಕೆ ಪೂರಕವೆಂಬಂತೆ ಚೀನಾ, ಜಪಾನ್, ನ್ಯೂಜಿಲ್ಯಾಂಡ್ ದೇಶಗಳು ತಮ್ಮ ಅಡ್ಡಿ ಇಲ್ಲ ಎಂಬುದಾಗಿ ಸ್ಪಷ್ಟಪಡಿಸಿವೆ.

ಆದರೆ ಅಣು ಒಪ್ಪಂದದ ಕರಡಿನಲ್ಲಿ ಹೆಚ್ಚಿನ ಬದಲಾವಣೆಗೆ ಪಟ್ಟು ಹಿಡಿದಿರುವ ಕಾರಣ ಎನ್ಎಸ್‌ಜಿ ಸಭೆಯನ್ನು ಒಂದು ಗಂಟೆಗಳ ಕಾಲ ಮುಂದೂಡಲಾಗಿದೆ.

ಆಸ್ಟ್ರಿಯಾದ ಸಮ್ಮತಿಯನ್ನು ಪಡೆಯುವ ನಿಟ್ಟಿನಲ್ಲಿ ಎನ್ಎಸ್‌ಜಿ ಸಭೆಯನ್ನು ಕೆಲಕಾಲ ಮುಂದೂಡಿರುವುದಾಗಿ ಹೇಳಿದೆ. ಅಲ್ಲದೇ ಅಣು ವಿಚಾರದ ಕುರಿತಾಗಿ ಮೂರನೇ ಸುತ್ತಿನ ಮಾತುಕತೆಗೂ ಎನ್‌ಎಸ್‌ಜಿ ದೇಶಗಳು ಆಸಕ್ತಿ ವಹಿಸಿಲ್ಲದ ಕಾರಣ ಇಂದು ನಿರ್ಧಾರ ಅಂತಿಮಗೊಳ್ಳಬೇಕಾಗಿದೆ.
ಮತ್ತಷ್ಟು
ಢಾಕಾ:ಮುಂದಿನ ವಾರ ಜಿಯಾ ಬಿಡುಗಡೆ ?
'ಬ್ರೈಸೆ' ಆಸ್ಟ್ರೇಲಿಯಾ ಪ್ರಥಮ ಮಹಿಳಾ ಗವರ್ನರ್
ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ನಾಳೆ ಪಾಕ್ ಅಧ್ಯಕ್ಷ ಚುನಾವಣೆ: ಕಣದಲ್ಲಿ ಜರ್ದಾರಿ
ಪರಮಾಣು ಇಂಧನ-ಅಮೆರಿಕ ನಿಲುವಿಗೆ ಭಾರತ ಆಘಾತ
ಪದಚ್ಯುತ ನ್ಯಾಯಾಧೀಶರ ಮರುನೇಮಕ ಇಲ್ಲ:ವರದಿ