ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಅಣುಬಂಧ-ಇಂದು ಮತ್ತೆ ಸಭೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುಬಂಧ-ಇಂದು ಮತ್ತೆ ಸಭೆ
ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಗ್ರೀಸ್ ಸಿಗ್ನಲ್ ತೋರುವ ನಿಟ್ಟಿನಲ್ಲಿ ವಿಯೆನ್ನಾದಲ್ಲಿ ಗುರುವಾರ ಆರಂಭಗೊಂಡ ಪರಮಾಣು ಸಾಮಾಗ್ರಿ ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸಭೆಯು ಶುಕ್ರವಾರ ತಡರಾತ್ರಿಯವರೆಗೂ ಅಂತಿಮ ನಿರ್ಧಾರಕ್ಕೆ ಬರಲಾಗದೆ ಸಭೆಯನ್ನು ಶನಿವಾರಕ್ಕೆ ಮುಂದೂಡಿದ್ದು, ಅಂತಿಮ ನಿರ್ಧಾರಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದೆ.

ಅಮೆರಿಕ ಸಿದ್ದಪಡಿಸಿರುವ, ಭಾರತಕ್ಕೆ ಅನ್ವಯಿಸುವ ವಿನಾಯ್ತಿ ದಾಖಲೆಗೆ ಸಮ್ಮತಿ ಸೂಚಿಸಲು ಆಸ್ಟ್ರಿಯಾ ತನ್ನ ಒಪ್ಪಿಗೆ ಸೂಚಿಸಿರಲಿಲ್ಲ. ಸಮ್ಮತಿ ನೀಡುವ ಮುನ್ನ ಇನ್ನೂ ಕೆಲ ಸಂದೇಹಗಳನ್ನು ನಿವಾರಿಸಿಕೊಳ್ಳಬೇಕಾಗಿದೆ ಎಂದು ಆಸ್ಟ್ರಿಯಾ ಪಟ್ಟು ಹಿಡಿದಿದೆ.

ಆ ನಿಟ್ಟಿನಲ್ಲಿ 45ದೇಶಗಳ ಎನ್‌ಎಸ್‌ಜಿ ಗುಂಪು ಭಾರತ-ಅಮೆರಿಕ ಅಣು ಒಪ್ಪಂದಕ್ಕೆ ಅಂತಿಮ ಮುದ್ರೆಯೊತ್ತಲು ಶನಿವಾರ 2.30ಕ್ಕೆ ಮತ್ತೆ ಸಭೆ ಸೇರಲು ನಿರ್ಧರಿಸಿದೆ.

ಆ ಮೂಲಕ 45 ದೇಶಗಳ ಒಮ್ಮತಾಭಿಪ್ರಾಯದ ಮೂಲಕ ಅಣು ಒಪ್ಪಂದಕ್ಕೆ ಹಾದಿ ಸುಗಮಗೊಳ್ಳುವ ಮೂಲಕ 34 ವರ್ಷಗಳ ಭಾರತದ ಸುದೀರ್ಘ ಹೋರಾಟಕ್ಕೆ ಜಯ ದೊರೆಯುವುದೇ ಎಂದು ಕಾದು ನೋಡಬೇಕಾಗಿದೆ.

ಭಾರತದ ಅಣು ಒಪ್ಪಂದಕ್ಕೆ ಈ ಮೊದಲು ಚೀನಾ, ಜಪಾನ್, ನ್ಯೂಜಿಲ್ಯಾಂಡ್ ಸೇರಿದಂತೆ ಆಸ್ಟ್ರಿಯಾ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದೆಯಾದರೂ ಕೊನೆಗಳಿಗೆಯಲ್ಲಿ ಚೀನಾ, ಜಪಾನ್, ನ್ಯೂಜಿಲ್ಯಾಂಡ್ ತಮ್ಮ ಸಮ್ಮತಿಯನ್ನು ಸೂಚಿಸಿದ್ದವು. ಆದರೆ ಇದೀಗ ಚೀನಾ,ಆಸ್ಟ್ರಿಯಾ,ಐಯರ್ಲ್ಯಾಂಡ್ ಸೇರಿದಂತೆ ನಾಲ್ಕು ದೇಶಗಳು ಮತ್ತೆ ಅಪಸ್ವರ ಎತ್ತಿವೆ.

ಆಸ್ಟ್ರಿಯಾ, ಐಯರ್ಲ್ಯಾಂಡ್ ಸೇರಿದಂತೆ ನಾಲ್ಕು ದೇಶಗಳು ತನ್ನ ಹಠಮಾರಿ ಧೋರಣೆಯನ್ನು ಮುಂದುವರಿಸಿದ್ದು, ಅಮೆರಿಕ ಈ ಒಪ್ಪಂದಕ್ಕೆ ಬೆಂಬಲ ನೀಡುವಂತೆ ಒತ್ತಡ ಹೇರುತ್ತಿದೆ.

ಇದೀಗ ಇಂದು ನಡೆಯುತ್ತಿರುವ ಎರಡನೇ ಸುತ್ತಿನ ನಿರ್ಣಾಯಕ ಮಾತುಕತೆಯಲ್ಲಿ ಒಮ್ಮತಾಭಿಪ್ರಾಯ ಮೂಡಿಸಿ, ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದಕ್ಕೆ ಅಂಕಿತ ಬೀಳಬೇಕಾಗಿದೆ ಎಂದು ಎನ್‌ಎಸ್‌ಜಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಮತ್ತಷ್ಟು
ಅಣುಬಂಧಕ್ಕೆ 'ಆಸ್ಟ್ರಿಯಾ ಅಡ್ಡಗಾಲು'
ಢಾಕಾ:ಮುಂದಿನ ವಾರ ಜಿಯಾ ಬಿಡುಗಡೆ ?
'ಬ್ರೈಸೆ' ಆಸ್ಟ್ರೇಲಿಯಾ ಪ್ರಥಮ ಮಹಿಳಾ ಗವರ್ನರ್
ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ನಾಳೆ ಪಾಕ್ ಅಧ್ಯಕ್ಷ ಚುನಾವಣೆ: ಕಣದಲ್ಲಿ ಜರ್ದಾರಿ
ಪರಮಾಣು ಇಂಧನ-ಅಮೆರಿಕ ನಿಲುವಿಗೆ ಭಾರತ ಆಘಾತ