ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕ್ ಅಧ್ಯಕ್ಷ ಚುನಾವಣೆ:ಮತದಾನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಅಧ್ಯಕ್ಷ ಚುನಾವಣೆ:ಮತದಾನ ಆರಂಭ
ಪಾಕಿಸ್ತಾನದ ಅಧ್ಯಕ್ಷ ಚುನಾವಣೆಯ ಮತದಾನ ಶನಿವಾರ ಬೆಳಿಗ್ಗೆ 10.30ಕ್ಕೆ ಗಂಟೆಗೆ ಆರಂಭಗೊಂಡಿದ್ದು, ಪಿಪಿಪಿಯ ಅಸಿಫ್ ಅಲಿ ಜರ್ದಾರಿ ಸೇರಿದಂತೆ ನಾಲ್ಕು ಮಂದಿ ಚುನಾವಣಾ ಕಣದಲ್ಲಿದ್ದಾರೆ.

ಇಂದು ಬೆಳಿಗ್ಗೆ ಆರಂಭಗೊಂಡಿರುವ ಅಧ್ಯಕ್ಷ ಚುನಾವಣೆಯ ಮತದಾನ ಮಧ್ನಾಹ್ನ 3ಗಂಟೆಗೆ ಮುಕ್ತಾಯಗೊಳ್ಳಲಿದ್ದು,ಬಳಿಕ ಫಲಿತಾಂಶವನ್ನು ಘೋಷಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಪಾಕ್ ಅಧ್ಯಕ್ಷಗಾದಿಗಾಗಿ ಮಾಜಿ ಪ್ರಧಾನಿ ದಿ.ಬೇನಜೀರ್ ಭುಟ್ಟೋ ಪತಿ, ಪಿಪಿಪಿಯ ವರಿಷ್ಠ ಅಸಿಫ್ ಅಲಿ ಜರ್ದಾರಿ, ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಪಕ್ಷದ ಸೈಯದ್ ಉಜ್ ಜಮಾನ್ ಸಿದ್ದಿಕಿ ಮತ್ತು ಮಾಜಿ ನ್ಯಾಯಾಧೀಶ, ಪಾಕಿಸ್ತಾನ್ ಮುಸ್ಲಿಂ ಲೀಗ್ ಕ್ವೆದಾ (ಪಿಎಂಎಲ್‌ಕ್ಯೂ) ನ ಮುಶಾಹಿದ್ ಹುಸೈನ್ ಸ್ಪರ್ಧಾ ಕಣದಲ್ಲಿದ್ದಾರೆ.

ಗುಪ್ತ ಮತದಾನ ನಡೆಯುವ ಮೂಲಕ ಅಭ್ಯರ್ಥಿ ನಿರೀಕ್ಷಿತ ಬಹುಮತ ಪಡೆದರೆ, ಮುಂದಿನ ಐದು ವರ್ಷಗಳ ಕಾಲ ದೇಶದ ಅಧ್ಯಕ್ಷಗಾದಿಯನ್ನು ಅಲಂಕರಿಸಲಿದ್ದಾರೆ. ಇಂದು ಸಂಜೆ ಅಭ್ಯರ್ಥಿ ಆಯ್ಕೆಯ ಅಂತಿಮ ಘೋಷಣೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಚುನಾವಣೆಯಲ್ಲಿ ಪಿಪಿಪಿ ಪೂರ್ಣ ಬಹುಮತ ಪಡೆಯುವ ಮೂಲಕ, ಜರ್ದಾರಿ ಅವರು ದೇಶದ ಅಧ್ಯಕ್ಷ ಪಟ್ಟವನ್ನು ಅಲಂಕರಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪಿಪಿಪಿ ವಕ್ತಾರ ಪರ್ಜಾನಾ ರಾಜಾ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಅಣುಬಂಧ-ಇಂದು ಮತ್ತೆ ಸಭೆ
ಅಣುಬಂಧಕ್ಕೆ 'ಆಸ್ಟ್ರಿಯಾ ಅಡ್ಡಗಾಲು'
ಢಾಕಾ:ಮುಂದಿನ ವಾರ ಜಿಯಾ ಬಿಡುಗಡೆ ?
'ಬ್ರೈಸೆ' ಆಸ್ಟ್ರೇಲಿಯಾ ಪ್ರಥಮ ಮಹಿಳಾ ಗವರ್ನರ್
ಅಣುಬಂಧ: ಪ್ರಣಬ್ ಹೇಳಿಕೆಗೆ ಎನ್‌ಎಸ್‌ಜಿ ಸ್ವಾಗತ
ನಾಳೆ ಪಾಕ್ ಅಧ್ಯಕ್ಷ ಚುನಾವಣೆ: ಕಣದಲ್ಲಿ ಜರ್ದಾರಿ